ಕರಾವಳಿ

ಬರೋಬ್ಬರಿ ಒಂದು ವರ್ಷದ ಬಳಿಕ ಮೊಬೈಲ್ ಸುಲಿಗೆಕೋರರನ್ನು ಬಂಧಿಸಿದ ಬ್ರಹ್ಮಾವರ ಪೊಲೀಸರು!

Pinterest LinkedIn Tumblr

ಉಡುಪಿ: ಕಳೆದೊಂದು ವರ್ಷದ ಹಿಂದೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಉದ್ಯಾವರ ಮೇಲ್ಪೇಟೆ ವಾಸಿ ಮೊಹಮದ್‌ ಫಹಾದ್‌ ಮತ್ತು ಸಂಪಿಗೆನಗರ ಕಂಪನಬೆಟ್ಟು ವಾಸಿ ಅಪ್ರಾಪ್ತ ವಯಸ್ಕ ಬಂಧಿತರು. ಸುಲಿಗೆಯಾದ ರೆಡ್‌ಮಿ ಮೊಬೈಲ್‌ ಮತ್ತು ಕೃತ್ಯಕ್ಕೆ ಬಳಸಿದ ಒಂದು ಪಲ್ಸರ್‌ ಬೈಕ್‌ ಸೇರಿ ಒಟ್ಟು ರೂ. 70,000/- ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

2019ರ ಮೇ. 27 ರಂದು ಬೆಳಿಗ್ಗೆ 08:45 ಗಂಟೆಗೆ ಬ್ರಹ್ಮಾವರ ತಾಲೂಕು ಹಂದಾಡಿ ಗ್ರಾಮದ ಕಲ್ಲಬೆಟ್ಟುನಲ್ಲಿ ಮಹಿಳೆಯೊಬ್ಬರು ಕೆಲಸಕ್ಕೆಂದು ಹೊರಟು ಮೊಬೈಲ್‌ನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿರುವಾಗ ಅವರ ಹಿಂಭಾಗದಿಂದ ಅಪರಿಚಿತರಿಬ್ಬರು ಮೋಟಾರ್ ಸೈಕಲ್‌ನಲ್ಲಿ ಬಂದು ಮೊಬೈಲ್‌ ಅನ್ನು ಕಸಿದುಕೊಂಡು ಹೋಗಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಟೋರಿಯಸ್ ಆರೋಪಿ…
ಆರೋಪಿ ಮೊಹಮದ್‌ ಫಹಾದ್‌ ಈತನು ಈ ಮೊದಲು ಸುಲಿಗೆ ಮಾಡಿದ ಬಗ್ಗೆ ಮಣಿಪಾಲ ಠಾಣೆಯಲ್ಲಿ, ಗಾಂಜಾ ಮಾರಾಟ ಮಾಡಿದ ಬಗ್ಗೆ ಮಲ್ಪೆ ಠಾಣೆಯಲ್ಲಿ ಮತ್ತು ಗಾಂಜಾ ಸೇವನೆ ಮಾಡಿದ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಈತನು ರೂಢಿಗತ ಕಳವು ಆರೋಪಿಯಾಗಿದ್ದಾನೆ.

ಕಾರ್ಯಾಚರಣೆ ತಂಡ….
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್‌ ಚಂದ್ರ ಮತ್ತು ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ. ಜೈಶಂಕರ್‌ ಮಾರ್ಗದರ್ಶನದಲ್ಲಿ, ಬ್ರಹ್ಮಾವರ ವೃತ್ತದ ಸಿ.ಪಿ.ಐ. ಅನಂತ ಪದ್ಮನಾಭ ಮತ್ತು ಬ್ರಹ್ಮಾವರ ಪೊಲೀಸ್‌ ಠಾಣೆಯ ಪಿ.ಎಸ್‌.ಐ. ರಾಘವೇಂದ್ರ, ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ಪ್ರವೀಣ್‌ ಶೆಟ್ಟಿಗಾರ್‌, ದಿಲೀಪ್‌ ಮತ್ತು ಬ್ರಹ್ಮಾವರ ವೃತ್ತ ಕಛೇರಿಯ ಸಿಬ್ಬಂದಿ ಎಎಸ್ಐ ಕೃಷ್ಣಪ್ಪ, ಪ್ರದೀಪ್‌ ನಾಯಕ್‌, ಗಣೇಶ್‌, ರವೀಂದ್ರ, ಶೇಖರ್‌ ಹಾಗೂ ಅಣ್ಣಪ್ಪ ಇವರ ತಂಡ ಈ ಈ ಕಾರ್ಯಾಚರಣೆ ನಡೆಸಿದೆ.

Comments are closed.