ಕರಾವಳಿ

ಜಡಿಮಳೆಗೂ ಆರದ ದೀಪ : ತಲಪಾಡಿ ಕೆ.ಸಿ.ರೋಡ್ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ನಡೆದ ಅದ್ಭುತ

Pinterest LinkedIn Tumblr

ತುಳುನಾಡು ಪರಶುರಾಮ ಸೃಷ್ಟಿಯ ನಾಡು . ಈ ತುಳುನಾಡಿನಲ್ಲಿ ಭೂತರಾಧನೆಗೆ ಮೊದಲ ಅದ್ಯತೆ . ವಿಶಿಷ್ಟಪೂರ್ಣವಾಗಿ ನಡೆಯುವ ದೈವಾರಾಧನೆಯಿಂದ ಇಲ್ಲಿನ ದೈವಿಕ ಶಕ್ತಿಗಳ ಕಾರ್ನಿಕ ಆಗಾಗ ನಮಗೆ ತಿಳಿದು ಬರುತ್ತದೆ. ಹೌದು , ಜುಲೈ -16ರಂದು ನಡೆದ ಕರ್ಕಟಕ ಸಂಕ್ರಮಣವನ್ನು ಎಲ್ಲಾ ದೈವಸ್ಥಾನಗಳಲ್ಲೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಕಾರಣ , ಈ ಸಂಕ್ರಮಣದ ನಂತರ ಮುಂದಿನ ಸಿಂಹ ಸಂಕ್ರಮಣದವರೆಗೆ ಎಲ್ಲಾ ದೈವಸ್ಥಾನಗಳಲ್ಲಿ ಯಾವುದೇ ಪೂಜಾ ಕಾರ್ಯಗಳು ನಡೆಯುವುದಿಲ್ಲ . ತುಳು ಜನಪದದ ಪ್ರಕಾರ ಇದು ಆಟಿ ತಿಂಗಳು . ಈ ಸಮಯದಲ್ಲಿ ಎಲ್ಲಾ ದೈವಸ್ಥಾನಗಳು ಮುಚ್ಚಿರುತ್ತದೆ .

ಹಾಗಾಗಿ , ಈ ಸಂಕ್ರಮಣ ಆಚರಣೆಯ ಸಂದರ್ಭದಲ್ಲಿ ಹೆಚ್ಚಿನ ದೈವಸ್ಥಾನಗಳಲ್ಲೂ ಭಕ್ತಾದಿಗಳು ಸೇರಿ ತಮ್ಮ ಇಷ್ಟಾರ್ಥಗಳಿಗೆ ಪ್ರಾರ್ಥಿಸುವುದು ಹಿಂದಿನಿಂದಲೂ ಬಂದ ವಾಡಿಕೆ. ಆದರೆ , ಈ ಬಾರಿಯ ಸಂಕ್ರಮಣ ಆಚರಣೆಯ ಸಂದರ್ಭದಲ್ಲಿ ಹೆಚ್ಚಿನ ದೈವಸ್ಥಾನಗಳಲ್ಲಿ ” ಕೊರೊನಾ ” ಎನ್ನುವ ಮಹಾಮಾರಿಯ ಸರ್ವನಾಶಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿತ್ತು . ಇಂತಹ ದೈವಿಕ ಶಕ್ತಿಯ ಕ್ಷೇತ್ರದಲ್ಲಿ ನಡೆದ ಬಹು ಪ್ರಾಮುಖ್ಯತೆಯ ಪೂಜಾವಿಧಿಯ ಸಂದರ್ಭದಲ್ಲಿ ವಿಶೇಷವೊಂದು ನಡೆದ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಬ್ಬುಸ್ವಾಮಿ ಕ್ಷೇತ್ರ :

ಮಂಗಳೂರು ನಗರದ ಹೊರವಲಯದಲ್ಲಿರುವ ತಲಪಾಡಿ ಕೆ.ಸಿ.ರೋಡ್ ನಲ್ಲಿರುವ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಈ ವಿಶೇಷ ಘಟನೆಯೊಂದು ನಡೆಯಿತು.ಸಂಕ್ರಮಣ ಪೂಜೆಯ ಸಂದರ್ಭದಲ್ಲಿ ಜಡಿಮಳೆ ಸುರಿಯಿತು . ಮಳೆಗಾಲ ಜಡಿಮಳೆ ಬರುವುದರಲ್ಲಿ ವಿಶೇಷ ಏನು ಎನ್ನುವವರು ಇರಬಹುದು. ಆದರೆ , ತಲಪಾಡಿ ಕೆ.ಸಿ.ರೋಡ್ ನಲ್ಲಿರುವ ಶ್ರೀ ಬಬ್ಬುಸ್ವಾಮಿ ಕ್ಷೇತ್ರದಲ್ಲಿ ಎಲ್ಲ ದೈವದ ಕಲ್ಲುಗಳಿಗೆ ದೀಪವನ್ನು ಇಡಲಾಗಿತ್ತು. ಸಂಕ್ರಮಣ ನಡೆಯುವ ಸಂದರ್ಭದಲ್ಲಿ ಜೋರಾಗಿ ಬೀಸಿದ ಗಾಳಿ ಮಳೆಗೆ ಶ್ರೀ ಕೋರ್ದಬ್ಬು ದೇವಸ್ಥಾನದ ಹೊರಗೆ ಇರುವ ಅಯ್ಯದ ಕಲ್ಲಿನಲ್ಲಿ ಇರಿಸಿದ ದೀಪ ಪ್ರಕಾಶಮಾನವಾಗಿ ಹೊತ್ತಿ ಉರಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಕೆಲವರು ಇದು ಈ ಕ್ಷೇತ್ರದಲ್ಲಿ ನೆಲೆ ನಿಂತ ಶ್ರೀ ಬಬ್ಬುಸ್ವಾಮಿಯ ಕಾರ್ನಿಕದ ಒಂದು ದೃಷ್ಟಾಂತ ಎನ್ನುತ್ತಾರೆ . ಕರಿಯ ಮಣ್ಣು ಪುಲಿಂಕೆದಡಿ ಕೊಟ್ಯ ಎನ್ನುವ ಪವಿತ್ರ ಸ್ಥಳದಲ್ಲಿ ಶ್ರೀ ಬಬ್ಬುಸ್ವಾಮಿ ಅನಾದಿ ಕಾಲದಲ್ಲಿ ನೆಲೆಯಾಗಿದ್ದು , ಇಂತಹ ಪುಣ್ಯಕ್ಷೇತ್ರದಲ್ಲಿ ನಡೆದ ಸಂಕ್ರಮಣ ಪೂಜೆಯ ಸಂದರ್ಭದಲ್ಲಿ ಬೀಸಿದ ಗಾಳಿ ಮಳೆಗೂ ಉರಿಯುತ್ತಿದ್ದ ದೀಪವನ್ನು ಕಂಡ ಕ್ಷೇತ್ರದ ಭಕ್ತಾದಿಗಳು ಭಕ್ತಿಪರವಶರಾಗಿ ದೀನತೆಯಿಂದ ದೇಶಕ್ಕೆ ಬಂದ ಕೊರೊನಾ ಎನ್ನುವ ಮಹಾಮಾರಿಯನ್ನು ಶ್ರೀ ಬಬ್ಬುಸ್ವಾಮಿ ನಿರ್ಗಹಿಸಲಿ ಎಂದು ಪ್ರಾರ್ಥಿಸಿದರು.

ಶ್ರೀ ಬಬ್ಬುಸ್ವಾಮಿಗೆ ಇಂತಹ ಮಹಾಮಾರಿ ರೋಗಗಳನ್ನು ನಿರ್ಗಹಿಸುವ ಶಕ್ತಿ ಇದೆ . ಕೈಲಾಸವಾಸಿ ಶ್ರೀ ಈಶ್ವರ ದೇವರ ಅಂಶಸಂಭೂತರಾಗಿ ಜನಿಸಿದ ಶ್ರೀ ಬಬ್ಬುಸ್ವಾಮಿಗೆ ಅದಿಮಾಯೆ ಶ್ರೀ ಮಹಮ್ಮಾಯಿ ದೇವಿ ಇಂತಹ ಮಹಾಮಾರಿ ರೋಗಳನ್ನು ನಿರ್ಗಹಿಸುವ ವರಪ್ರಸಾದವನ್ನು ಶ್ರೀ ಬಬ್ಬುಸ್ವಾಮಿಗೆ ನೀಡಿದ ಉಲ್ಲೇಖ ಜನಪದದಲ್ಲಿದೆ . ಇಂತಹ ಉಲ್ಲೇಖವನ್ನು ನೀಡಿ ಗ್ರಾಮಸ್ಥರೆಲ್ಲರೂ ಶ್ರೀ ಬಬ್ಬುಸ್ವಾಮಿಯಲ್ಲಿ ಈ ಸಂಕ್ರಮಣ ಪೂಜೆಯ ಸಂದರ್ಭದಲ್ಲಿ ಪ್ರಾರ್ಥಿಸಿಕೊಂಡರು .

■ ಎಸ್ ಜಗದೀಶ್ಚಂದ್ರ ಅಂಚನ್, ಸೂಟರ್ ಪೇಟೆ

Comments are closed.