ಕರಾವಳಿ

ದ.ಕ.ಜಿಲ್ಲೆಯಲ್ಲಿ ಮಂಗಳವಾರ 5 ಮಂದಿ ಕೊರೋನಾಗೆ ಬಲಿ : ಮೃತರ ಸಂಖ್ಯೆ 92ಕ್ಕೆ ಏರಿಕೆ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ‌ ಕೊರೋನಾ ಸೋಂಕಿಗೆ ಬರೋಬ್ಬರಿ‌ 5 ಮಂದಿ ಬಲಿಯಾಗಿದ್ದಾರೆ. ನಾಲ್ವರು ಹೆಂಗಸರು ಹಾಗೂ ಓರ್ವ ಗಂಡಸು ಕೊರೋನಾಗೆ ಬಲಿಯಾಗಿದ್ದಾರೆ.

60,66,70 ಹಾಗೂ 75 ವರ್ಷದ ನಾಲ್ವರು ಮಹಿಳೆಯರು ಹಾಗೂ 54 ವರ್ಷದ ಓರ್ವ ಗಂಡಸು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ. ಇನ್ನು ದ.ಕ.ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ ಒಟ್ಟು 92ಕ್ಕೆ ಏರಿಕೆಯಾಗಿದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, 162 ಮಂದಿಗೆ ಸೋಂಕು ಧೃಢಪಟ್ಟಿದೆ. ಕಳೆದ ಹಲವಾರು ದಿನಗಳಿಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ಸೋಮವಾರ ಒಮ್ಮೆಲೆ ಕಡಿಮೆಯಾಗಿತ್ತು.

ಆದರೆ ಮಂಗಳವಾರ ಮತ್ತು ಬುಧವಾರ ಮತ್ತೆ ದಿಢೀರ್ ಹೆಚ್ಳಳವಾಗಿದೆ. ಬುಧವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಪ್ರಕಟಿಸಿದ ಪ್ರಕಟಣೆಯಲ್ಲಿ ದ.ಕ. ಜಿಲ್ಲೆಯಲ್ಲಿ 162 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಬುಧವಾರದ ಪ್ರಮುಖ ಅಂಶಗಳು :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ ಐವರು ಕೊರೋನಾ‌ ಮಹಾಮಾರಿಗೆ ಬಲಿ

ನಾಲ್ವರು ಹೆಂಗಸರು ಹಾಗೂ ಓರ್ವ ಗಂಡಸು ಕೊರೋನಾಗೆ ಬಲಿ

60,66,70 ಹಾಗೂ 75 ವರ್ಷದ ನಾಲ್ವರು ಮಹಿಳೆಯರು ಬಲಿ

54 ವರ್ಷದ ಓರ್ವ ಗಂಡಸು ಕೊರೋನಾಗೆ ಬಲಿ

ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 92ಕ್ಕೆ ಏರಿಕೆ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಾವಿನ‌ ಸಂಖ್ಯೆ.

Comments are closed.