ಮಂಗಳೂರು, ಜುಲೈ.21: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಡಿಂಕಿಡೈನ್, ಯುವ ತುಳುನಾಡ್ (ರಿ) ಕುಡ್ಲ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ, ಸಹ್ಯಾದ್ರಿ ಸಂಚಯ, ಕನ್ನಡ ಕಟ್ಟೆ, ತುಳುನಾಡ ರಕ್ಷಣಾ ವೇದಿಕೆ ಇವರ ಸಹಯೋಗದೊಂದಿಗೆ ಸೋಮವಾರ ನಗರದ ಕದ್ರಿ ಪಾರ್ಕ್ ಸಮೀಪದ ಡಿಂಕಿಡೈನ್ ಆವರಣದಲ್ಲಿ ‘ಆಟಿ ಅಮಾಸೆದ ಮರ್ದ್ ಗಂಜಿ ಪಟ್ಟುನ ಲೇಸ್” (ಆಟಿ ಅಮಾವಾಸೆಯ ಮದ್ದು ಹಂಚುವ ಕಾರ್ಯಕ್ರಮ) ನಡೆಯಿತು.
ಡಿಂಕಿ ಡೈನ್ ಚಾವಡಿಯಲ್ಲಿ ನಡೆದ ಆಟಿದ ಮರ್ದ್‍ಗಂಜಿ ಪಟ್ಟುನ ಕಾರ್ಯಕ್ರಮದ ಪ್ರಾತ್ಯಕ್ಷತೆಯನ್ನು ಆಯುರ್ವೇದಿಕ್ ಡಾಕ್ಟರ್ ಪ್ರತಿಭಾ ರೈ, ಉದ್ಘಾಟಿಸಿದರು.
ಆಟಿ ತಿಂಗಳಿನ ಅಮಾವಾಸ್ಯೆಯಂದು ಕುಡಿಯುವ ಹಾಳೆ ಕೆತ್ತೆ ಕಷಾಯವು ಸರ್ವ ರೋಗಕ್ಕೆ ಮದ್ದು, ಅಂತಹ ಹಾಳೆ ಕೆತ್ತೆ ಕಷಾಯವನ್ನು ಮತ್ತು ಮೆಂತೆ ಗಂಜಿಯನ್ನು ಮಂಗಳೂರಿನ ನಗರವಾಸಿಗಳಿಗೆ ಉಚಿತವಾಗಿ ವಿತರಿಸುತ್ತಿರುವ ಈ ಕಾರ್ಯಕ್ರಮ ನಿಜವಾಗಲೂ ಶ್ಲಾಘನೀಯ ಎಂದು ಡಾ. ಪ್ರತಿಭಾ ರೈ, ಹೇಳಿದರು.
ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಯಾವೂದೇ ಸಭಾಕಾರ್ಯಕ್ರಮವನ್ನು ಅಯೋಜಿಸದೆ, ಸರಕಾರದ ಮಾರ್ಗಸೂಚಿ ಪ್ರಕಾರ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಮದ್ದು ಹಂಚುವ ಪ್ರಾತ್ಯಕ್ಷತೆಯನ್ನು ಸರಳವಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿಶೇಷ ಅಥಿತಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ತುಳುನಾಡಿನ ಆಟಿ ಅಮಾವಾಸ್ಯೆಯ ಮಹತ್ವವನ್ನು ತಿಳಿಸಿದರು.
ಮನಪಾ ಸದಸ್ಯ ಸುಧೀರ್ ಕಣ್ಣೂರ್, ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಜೋಗಿ, ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಚಂದ್ರಶೇಖರ್ ಶೆಟ್ಟಿ ಮುಂತಾದವರು ಅಥಿತಿಗಳಾಗಿದ್ದರು.
ಕಾರ್ಯಕ್ರಮದ ರೂವಾರಿ, ಡಿಂಕಿ ಡೈನ್ ಮಾಲಕರಾದ ಸ್ವರ್ಣಸುಂದರ್ ಅಥಿತಿಗಳನ್ನು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.
ಕಂಟೈನರ್ ಮೂಲಕ ಪಾರ್ಸೆಲ್ ವ್ಯವಸ್ಥೆ:
ಮುಂಜಾನೆ 06 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮವು 8 ಗಂಟೆಯ ವರೆಗೆ ಸಾಗಿದ್ದು, ಸಾವಿರಾರು ಜನರು ಡಿಂಕಿ ಡೈನ್‍ನ ಪರಿಸರದಲ್ಲಿ ಪಾಲ್ಗೊಂಡು ಹಾಲೆ ಮರದ ಕಷಾಯ ಮತ್ತು ಮೆಂತೆಗಂಜಿಯನ್ನು ಸೇವಿಸಿದರು. ಮತ್ತೆ ಕೆಲವರು ತಮ್ಮ ಮನೆಯವರಿಗೆ ಕೊಂಡು ಹೋದರು. ಕಾರ್ಯಕ್ರಮದ ಅಯೋಜಕರು ಪಾರ್ಸೆಲ್ ತೆಗೆದುಕೊಂಡು ಹೋಗುವವರಿಗೆ ಉಚಿತ ಕಂಟೈನರ್ ವ್ಯವಸ್ಥೆ ಮಾಡಿದ್ದರು.
Comments are closed.