ಕರಾವಳಿ

ವಸತಿ ಶಾಲೆ/ಪ.ಪೂರ್ವ ಕಾಲೇಜು ಮತ್ತು ಮೌಲಾನ ಆಜಾದ್ ಮಾದರಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು ಜುಲೈ 21: ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಬಾಲಕಿಯರ), ಪದವಿ ಪೂರ್ವ ವಸತಿ ಕಾಲೇಜು (ಬಾಲಕಿಯರ) ಹಾಗೂ ಮುಸ್ಲಿಂ ವಸತಿ ಶಾಲೆ (ಬಾಲಕರ) ಗಳ 6, 7, 8, 9 ನೇ ತರಗತಿ / ಪ್ರಥಮ ಪಿಯುಸಿ ವಿಜ್ಞಾನ ವಿಭಾಗ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಕಚೇರಿ, ಸಂಬಂಧಪಟ್ಟ ವಸತಿ ಶಾಲೆಗಳು, ಕಾಲೇಜು, ಮೌಲಾನ ಅಜಾದ್ ಮಾದರಿ ಶಾಲೆಗಳು ಹಾಗೂ ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ಕಚೇರಿಗೆ ಆಗಸ್ಟ್ 10 ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ದೇರಳಕಟ್ಟೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಬಾಲಕಿಯರ) ದೂರವಾಣಿ ಸಂಖ್ಯೆ 7975562168/9449080150, ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು ದೂರವಾಣಿ ‌ಸಂಖ್ಯೆ 8970707858, ಮುಸ್ಲಿಂ ವಸತಿ ಶಾಲೆ (ಬಾಲಕರ) ದೂರವಾಣಿ ಸಂಖ್ಯೆ 9449311924.

ಮೌಲಾನಾ ಆಜಾದ್ ಮಾದರಿ ಶಾಲೆಗಳು, ಮಂಗಳೂರು ತಾಲ್ಲೂಕು: 

ಮಂಜನಾಡಿ ದೂರವಾಣಿ ಸಂಖ್ಯೆ 8618235367, ಕಲ್ಲಾಪುಪಟ್ಲ ದೂರವಾಣಿ ಸಂಖ್ಯೆ 9110878280, ಕುದ್ರೋಳಿ & ಗುರುಕಂಬಳ ಕಿನ್ನಿಕಂಬಳ ದೂರವಾಣಿ ಸಂಖ್ಯೆ 8970707858, ಉಳಾಯಿಬೆಟ್ಟು ದೂರವಾಣಿ ಸಂಖ್ಯೆ 9449080150.

ಬಂಟ್ವಾಳ ತಾಲ್ಲೂಕು: ಪುದು ಪರಂಗಿಪೇಟೆ ದೂರವಾಣಿ ಸಂಖ್ಯೆ 9481149135, ಅರಳ ಮೂಲರಪಟ್ನ ದೂರವಾಣಿ ಸಂಖ್ಯೆ 9845952483,

ಪುತ್ತೂರು ತಾಲ್ಲೂಕು: ಪುತ್ತೂರು ದೂರವಾಣಿ ಸಂಖ್ಯೆ 7829892702 ನ್ನು ಸಂಪರ್ಕಿಸಲು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.