ಕರಾವಳಿ

ಅಳಕೆ : ನಾಗರಪಂಚಮಿ ಆಚರಣೆ ರದ್ಧು – ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ

Pinterest LinkedIn Tumblr

ಮಂಗಳೂರು : ನಗರದ ಅಳಕೆ ಶ್ರೀ ನಾಗಬ್ರಹ್ಮ ದೇವಸ್ಥಾನ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದಲ್ಲಿ ಈ ಬಾರಿಯ ನಾಗರಪಂಚಮಿ ಆಚರಣೆಯನ್ನು ರದ್ಧುಗೊಳಿಸಲಾಗಿದ್ದು, ನಾಗರಪಂಚಮಿಯ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಶ್ರೀ ಕ್ಷೇತ್ರದಲ್ಲಿ ಜುಲೈ‌.25ರ ಶನಿವಾರದಂದು ಜರಗಲಿರುವ ನಾಗರಪಂಚಮಿ ಆಚರಣೆಯನ್ನು ಕೊರೋನಾ ವೈರಾಣು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ದ.ಕ.ಜಿಲ್ಲೆ ಉಡುಪಿ ಜಿಲ್ಲೆ ಸೇರಿದಂತೆ ಇನ್ನಿತರ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತಾಧಿಗಳಿಂದ ಸರಕಾರದ ನಿಯಮಾನುಸಾರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಷ್ಟಸಾಧ್ಯವೆಂದು ಪರಿಗಣಿಸಿ ಈ ಬಾರಿಯ “ನಾಗರಪಂಚಮಿ ಉತ್ಸವ”ವನ್ನು ರದ್ಧುಗೊಳಿಸಲಾಗಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

ಭಕ್ತಾಧಿಗಳು ದೇವರಿಗೆ ಅರ್ಪಿಸಲು ತರುವ ಹಾಲು, ಸಿಯಾಳ, ಹಣ್ಣುಕಾಯಿ ಇತ್ಯಾದಿ ವಸ್ತುಗಳನ್ನು ಒಪ್ಪಿಸಲು ಅವಕಾಶವಿರುವುದಿಲ್ಲ ಮತ್ತು ತೀರ್ಥ, ಸೇವಾಪ್ರಸಾದ, ಅನ್ನ ಸಂತರ್ಪಣೆ ಸೇವೆಗಳು ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Comments are closed.