ಕರಾವಳಿ

ಲಾಕ್ ಡೌನ್ ಎಫೆಕ್ಟ್; 2nd ಹ್ಯಾಂಡ್ ಕಾರು ಸೇಲ್ಸ್ ಮಾಡ್ತಿದ್ದ ಕೋಟದ ಯುವಕ ಆತ್ಮಹತ್ಯೆ

Pinterest LinkedIn Tumblr

ಉಡುಪಿ: ಬೆಂಗಳೂರಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಸೇಲ್ಸ್ ವ್ಯವಹಾರ ಮಾಡಿಕೊಂಡಿದ್ದು ಲಾಕ್ ಡೌನ್ ಸಮಯದಲ್ಲಿ ಊರಿಗೆ ಬಂದು ಯಾವುದೇ ಕೆಲಸವಿಲ್ಲದೇ ಜಿಗುಪ್ಸೆಗೊಂಡ ಉಡುಪಿ ಜಿಲ್ಲೆ ಕೋಟ ಮೂಲದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಬ್ರಹ್ಮಾವರ ತಾಲೂಕು ಕೋಟ ಸಮೀಪದ ಗಿಳಿಯಾರು ನಿವಾಸಿ ನಿತಿಶ್ ಶೆಟ್ಟಿ (31) ಆತ್ಮಹತ್ಯೆಗೆ ಶರಣಾದವರು.

ಮೃತ ನಿತಿಶ್ ಬೆಂಗಳೂರಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಸೇಲ್ಸ್ ವ್ಯವಹಾರ ಮಾಡಿಕೊಂಡಿದ್ದು, ಕೊವಿಡ್-19 ಲಾಕ್ ಡೌನ್ ಇದ್ದು ವ್ಯವಹಾರ ನಿಂತುಹೋಗಿದ್ದು ಬೆಂಗಳೂರಿನಿಂದ ಊರಿಗೆ ಬಂದು ಯಾವುದೇ ಕೆಲಸ ಇಲ್ಲದೇ ಮನೆಯಲ್ಲಿಯೇ ಇದ್ದಿದ್ದರು. ರಾತ್ರಿ ಮನೆಯಲ್ಲಿ ಎಲ್ಲರೂ ಊಟ ಮಲಗಿದ್ದು ,ನಿತಿನ್ ಊಟಕ್ಕೆ ಬಾರದೇ ಹಾಗೆಯೇ ಇದ್ದು , ನಿತಿನ್ ನಂತರ ಊಟ ಮಾಡಿ ಮಲಗಬಹುದು ಎಂದು ಮನೆಯವರೆಲ್ಲರೂ ರಾತ್ರಿ ಮಲಗಿದ್ದರು.

ನಿತಿನ್ ಬೆಂಗಳೂರಿನಲ್ಲಿ ವ್ಯವಹಾರ ಮಾಡಿಕೊಂಡಿದ್ದು ಇತ್ತೀಚೆಗೆ ಲಾಕ್ ಡೌನ್ ಪ್ರಯುಕ್ತ ವ್ಯವಹಾರವು ನಿಂತುಹೋಗಿದ್ದರಿಂದ ಬೇಸರದಿಂದ ಅಥವಾ ಇನ್ನಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಮೃತ ಪಟ್ಟಿರುವ ಬಗ್ಗೆ ಅವರ ಸಹೋದರ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.