ಕರಾವಳಿ

ದ.ಕ.ಜಿಲ್ಲೆಯಲ್ಲಿ ಶುಕ್ರವಾರ 139 ಮಂದಿಗೆ ಸೋಂಕು ಧೃಢ : ಮಾಹಮಾರಿಗೆ 8 ಮಂದಿ ಬಲಿ

Pinterest LinkedIn Tumblr

ಮಂಗಳೂರು, ಜುಲೈ.11 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ಶುಕ್ರವಾರ ಮತ್ತೊಮ್ಮೆ ದಾಖಲೆಯ 139 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಇದುವರೆಗೆ ದೃಢಪಟ್ಟ ಕೊರೊನಾ ಸೋಂಕು ಪ್ರಕರಣಗಳಲ್ಲಿ ಈ ದಿನ ಮತ್ತೊಮ್ಮೆ ಹೆಚ್ಚಿನ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1848ಕ್ಕೆ ಏರಿಕೆಯಾಗಿದೆ.

ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಮೂಲವೇ ಪತ್ತೆಯಾಗದಿರುವುದು ಜಿಲ್ಲೆಯನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಈ ನಡುವೆ 51 ಮಂದಿ ಶುಕ್ರವಾರದಂದು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಗೊಂದಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ 753 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಸೋಂಕಿತರ ಪೈಕಿ ಬಹುತೇಕರಿಗೆ ಸೋಂಕಿನ ಮೂಲ ಪತ್ತೆಯಾಗಿಲ್ಲ. 15 ಪ್ರಕರಣಗಳಲ್ಲಿ ಸೋಂಕು ಮೂಲ ಇನ್ನೂ ಪ್ರಗತಿಯಲ್ಲಿದ್ದರೆ, ಉಳಿದವು ಹೆಚ್ಚಿನರು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುವವರಾಗಿದ್ದಾರೆ.

ನಗರದ ಕಂಕನಾಡಿ, ಕುದ್ರೋಳಿ, ಫಳ್ನೀರ್, ಗೋರಿಗುಡ್ಡ, ಕೋಡಿಕಲ್, ಪೊಲೀಸ್ ಲೈನ್, ಬರ್ಕೆ, ಕದ್ರಿ, ಕೋಡಿಯಾಲ್‌ಬೈಲ್, ಬಿಜೈ, ಕಾವೂರು, ಮಂಗಳೂರು ರೈಲ್ವೆ ಕ್ವಾಟ್ರಸ್, ಲ್ಯಾಂಡ್‌ಲಿಂಕ್ಸ್, ಬಂಟ್ಸ್ ಹಾಸ್ಟೆಲ್, ಪದವಿನಂಗಡಿ, ಬೆಂಗ್ರೆ ಕಸಬ, ಬೋಳೂರು, ಕುಂಟಿಕಾನ, ಮುಲ್ಕಿ ಕಿಲ್ಪಾಡಿ, ಚೊಕ್ಕಬೆಟ್ಟು, ಕಾಟಿಪಳ್ಳ, ಸುರತ್ಕಲ್, ವಾಮಂಜೂರು, ಕೈಕಂಬ, ಪಡುಮಾರ್ನಾಡು, ಬಸ್ತಿಪಡ್ಪು, ತೌಡುಗೋಳಿ, ಹರೇಕಳ, ಅಂಬ್ಲಮೊಗರು, ಸೋಮೇಶ್ವರ, ಕೋಟೆಕಾರ್, ಅಜ್ಜಿನಡ್ಕ, ಬಿಸಿ ರೋಡ್, ಪಾಣೆಮಂಗಳೂರು, ತುಂಬೆ, ಪುದು, ಸಜಿಪಮೂಡ, ಕಕ್ಕೆಪದವು, ಪೆರಂಕಿ, ಕೈಕಂಬ, ಬೆಳ್ತಂಗಡಿ, ಸುಳ್ಯದ ವ್ಯಕ್ತಿಗಳಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಮಾಹಮಾರಿಗೆ 8 ಮಂದಿ ಬಲಿ :

ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು. ಶುಕ್ರವಾರ ಈ ಮಾಹಮಾರಿಗೆ 8ಮಂದಿ ಬಲಿಯಾಗಿದ್ದಾರೆ. ಒಂದೇ ದಿನ ಇಷ್ಟು ಸಂಖ್ಯೆಯಲ್ಲಿ ಮೃತಪಟ್ಟಿರುವುದು ಜಿಲ್ಲೆಯಲ್ಲಿ ಇದೇ ಮೊದಲು.

ಲಿವರ್‌ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 68 ವರ್ಷದ ವ್ಯಕ್ತಿ, ಅಧಿಕ ತೂಕ, ಒಬೆಸಿಟಿಯಿಂದ ಬಳಲುತ್ತಿದ್ದ ಹೊಸಬೆಟ್ಟುವಿನ 35 ವರ್ಷದ ವ್ಯಕ್ತಿ, ಮೂತ್ರಕೋಶದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ 67 ವರ್ಷದ ವ್ಯಕ್ತಿ, ಮಧುಮೇಹದಿಂದ ಬಳಲುತ್ತಿದ್ದ 57 ವರ್ಷದ ವ್ಯಕ್ತಿ, ನಂಜು, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 65 ವರ್ಷದ ವ್ಯಕ್ತಿ, ಮಧುಮೇಹದಿಂದ ಬಳಲುತ್ತಿದ್ದ 48 ವರ್ಷದ ವ್ಯಕ್ತಿ, ಮಧುಮೇಹದಿಂದ ಬಳಲುತ್ತಿದ್ದ 58 ವರ್ಷದ ಮಹಿಳೆ ಶುಕ್ರವಾರ ಮೃತಪಟ್ಟವರು. ಆದರೆ, ಸಾವಿನ ನಿಖರ ಕಾರಣ ನಿರ್ಧರಿಸಲು ತಜ್ಞರ ಸಮಿತಿಯಿಂದ ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

ಇಂದಿನ ಪ್ರಮುಖ ಅಂಶಗಳು :

ದ.ಕ ಜಿಲ್ಲೆಯಲ್ಲಿಂದು ಕೊರೋನಾದಿಂದ ಬರೋಬ್ಬರಿ 6 ಮಂದಿ ಸಾವು

ಮಂಗಳೂರಿನ ಕೋವಿಡ್ ವೆನ್ಲಾಕ್ ಆಸ್ಪತ್ರೆಯಲ್ಲಿ ನಾಲ್ವರು ಸಾವು

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಸಾವು

ಮಂಗಳೂರಿನ ತೊಕ್ಕೊಟ್ಟುವಿನ 58 ವರ್ಷದ ಮಹಿಳೆ

ಮಂಗಳೂರಿನ ಫಳ್ನೀರ್ ನ 65 ವರ್ಷದ ವೃದ್ಧ

ಉಳ್ಳಾಲ ಮೂಲದ 67 ವರ್ಷದ ವೃದ್ಧ

ಹೊಸಬೆಟ್ಟುವಿನ 35 ವರ್ಷದ ಯುವಕ ಸಾವು

ಖಾಸಗಿ ಆಸ್ಪತ್ರೆಯಲ್ಲೂ ಇಬ್ಬರು ಸಾವು.

Comments are closed.