ಕರಾವಳಿ

ಬೆಳ್ತಂಗಡಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ; ಐವರು ಬೈಕ್ ಕಳ್ಳರ ಸೆರೆ – ಸೊತ್ತು ವಶ

Pinterest LinkedIn Tumblr

 ಮಂಗಳೂರು/ ಬೆಳ್ತಂಗಡಿ : ಬೆಳ್ತಂಗಡಿ ಸುತ್ತ ಮುತ್ತ ನಿರಂತರ ಬೈಕ್ ಕಳವು ನಡೆಯುತ್ತಿದ್ದ ಪ್ರಕರಣವನ್ನು ಬೆಳ್ತಂಗಡಿ ಪಿಎಸ್ಐ ಶ್ರೀ ನಂದಕುಮಾರ್ ನೇತ್ರತ್ವದ ತಂಡ ಭೇದಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಬೆಳ್ತಂಗಡಿ ಪಿಎಸ್ಐ ಶ್ರೀ ನಂದಕುಮಾರ್ ಎಂಎಂ ಮತ್ತು ಸಿಬ್ಬಂದಿಯವರುಇತ್ತೀಚಿಗೆ ಜೈನ್ ಪೇಟೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ,ಎರಡು ಬೈಕಲ್ಲಿ ಬಂದ ಮೂವರನ್ನು ತಡೆದು ನಿಲ್ಲಿಸಿ ಪರಿಶೀಲಿಸಿ ವಿಚಾರಣೆ ಗೊಳಪಡಿಸಿದಾಗ ಇತ್ತೀಚೆಗೆ ಬೆಳ್ತಂಗಡಿ ಎಸ್ ಡಿ ಎಂ ಕಲಾ ಭವನದ ಮುಂಭಾಗದ ಮನೆಯಿಂದ ಮತ್ತು ಮೂಡಬಿದಿರೆ ಠಾಣಾ ವ್ಯಾಪ್ತಿಯಿಂದ ಕಳವು ಮಾಡಿರುವ ಬೈಕ್ ಎಂಬುದಾಗಿ ತಿಳಿದಿದು ಬಂದಿದೆ,

ಆರೋಪಿಗಳು ಉಜಿರೆ ಕುಂಟಿನಿಯ ಇನ್ನಿಬ್ಬರು ತಮ್ಮ ಜೊತೆ ಇರುವ ಬಗ್ಗೆ ತಿಳಿಸಿದ್ದು ಅದರಂತೆ ಸಿಬ್ಬಂದಿಯವರು ಮತ್ತೆರಡು ಬೈಕನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂದಿಸಿದ್ದಾರೆ.

ಕಾನ ಸುರತ್ಕಲ್ ನ ವಿಜಯ ಯಾನೆ ಆಂಜನೇಯ (23), ಉಳಾಯಿಬೆಟ್ಟು ನಿವಾಸಿ ಪ್ರದೀಪ್@ಚೇತನ್@ಪ್ರದಿ (27), ಬಂಟ್ವಾಳದ ಬಾಳೆಪುಣಿ ಪೂಪಾಡಿಕಲ್ಲು ನಿವಾಸಿ ಸುದೀಶ್ ಕೆಕೆ@ ಮುನ್ನ (20), ಬೆಳ್ತಂಗಡಿಉಜಿರೆಯ ಕುಂಟಿನಿ ಲಾಯಿಲ ಗ್ರಾಮದ ನಿವಾಸಿಗಳಾದ ಮೋಹನ@ ಪುಟ್ಟ (21) ಹಾಗೂ ನಿತಿನ್ ಕುಮಾರ್ 22 ಬಂಧಿತ ಆರೋಪಿಗಳು.

ಬಂಧಿತರಿಂದ 4 ಬೈಕ್ ಕಳವಿಗೆ ಬಳಸಿದ ಓಮ್ನಿ ಕಾರು ಒಟ್ಟು ಮೂರು ಲಕ್ಷ ಅರುವತ್ತ ಮೂರು ಸಾವಿರ ರೂ./ ಮೌಲ್ಯದ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಎಸ್ ಡಿ ಎಂ ಕಲಾ ಭವನದ ಮುಂಭಾಗದ ಮನೆ, ಮದ್ದಡ್ಕ,ಉಜಿರೆ ಸಾಯಿರಾಂ ಪ್ಲ್ಯಾಟ್ ಬಳಿಯ ಹಾಗೂ ಮೂಡಬಿದಿರೆ ಬಳಿಯಿಂದ ಕಳವು ಮಾಡಿರುವ ವಾಹನಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋವಿಡ್ 19 ಕೊರೋನ ವೈರಸ್ ತಡೆಗಟ್ಟುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಬೆಳ್ತಂಗಡಿ ಪೊಲೀಸರಿಗೆ ಮಳೆಗಾಲದ ಕಳವು ಕೂಡ ಸವಾಲಾಗಿತ್ತು.ಕೊರೋನ ವೈರಸ್ ಮುಂಜಾಗ್ರತಾ ಕ್ರಮದೊಂದಿಗೆ ಬೆಳ್ತಂಗಡಿ ಪೊಲೀಸರು ಐದು ಜನ ಕಳ್ಳರ ಜಾಲವನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಭೇದಿಸಿ ಆತಂಕದಲ್ಲಿದ್ದ ಸಾರ್ವಜನಿಕರಲ್ಲಿ ಪೊಲೀಸರ ಮೇಲೆ ಭರವಸೆ ಮೂಡುವಂತಾಗಿದೆ.

ಈ ಕಾರ್ಯಾಚರಣೆಯು ಶ್ರೀ ಲಕ್ಷ್ಮೀ ಪ್ರಸಾದ್ ಬಿಎಂ ಐಪಿಎಸ್,ಪೊಲೀಸ್ ಅಧೀಕ್ಷಕರು ದಕ ಜಿಲ್ಲೆ ಮತ್ತು ಶ್ರೀ ವಿಕ್ರಂ ಆಮ್ಟೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದಕ ಜಿಲ್ಲೆ ರವರ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್ಪಿ ಶ್ರೀ ವೆಲೆಂಟೈನ್ ಡಿಸೋಜ ಹಾಗೂ ಬೆಳ್ತಂಗಡಿ ವೃತ್ತ ನಿರೀಕ್ಷಕ ಶ್ರೀ ಸಂದೇಶ್ ಪಿಜಿ ರವರ ಆದೇಶದಂತೆ ಬೆಳ್ತಂಗಡಿ ಪಿಎಸ್ಐ ಶ್ರೀ ನಂದಕುಮಾರ್ ಎಂಎಂ ರವರ ನೇತೃತ್ವದಲ್ಲಿ ಪ್ರೊ.ಪಿಎಸ್ಐ ಶ್ರೀ ಶರತ್ ಕುಮಾರ್ ಎಎಸ್ಐ ಗಳಾದ ದೇವಪ್ಪ ಎಂಕೆ,ಕೆಜೆ ತಿಲಕ್,ಸಿಬ್ಬಂದಿ ಗಳಾದ ಲಾರೆನ್ಸ್ ಪಿಆರ್,ಇಬ್ರಾಹಿಂ ,ಅಶೋಕ್,ಚರಣ್ ರಾಜ್,ವೆಂಕಟೇಶ್, ಬಸವರಾಜ್ ರವರು ಪಾಲ್ಗೊಂಡಿದ್ದರು.

Comments are closed.