ಕರಾವಳಿ

ಸೇವಾ ನಿವೃತ್ತಿಯಾದ ವಿವಿಧ ಇಲಾಖ ಸಿಬ್ಬಂದಿಗಳಿಗೆ ಬೀಳ್ಕೊಡುಗೆ

Pinterest LinkedIn Tumblr

ಮಂಗಳೂರು : ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿಯನ್ನು ಹೊಂದಿರುವ ಸೀನಿಯರ್ ನರ್ಸಿಂಗ್ ಆಫೀಸರ್ ರೀಟಾ ಸಿಸ್ಟರ್ ಮತ್ತು ‘ಡಿ’ಗ್ರೂಪ್ ಸಿಬ್ಬಂದಿಗಳಾದ ದೇವಪ್ಪ , ಪುರೊಷೋತ್ತಮ, ಮಂಜುನಾಥ್ ಶೆಟ್ಟಿ ಸರೋಜಾ ಇವರಿಗೂ ವೆನ್ಲಾಕ್ ಆಸ್ಪತ್ರೆಯ ‘ಡಿ ‘ ಗ್ರೂಪ್ ಸಿಬ್ಬಂದಿಗಳಿಂದ ಬೀಳ್ಕೊಡುವ ಸಮಾರಂಭವನ್ನು ಮಾಡಲಾಯಿತು.

ಹಿರಿಯ ವಾಹನ ಚಾಲಕ ಹೆಚ್. ಮೋಹನ ಬೀಳ್ಕೊಡುಗೆ:

ತೋಟಗಾರಿಕೆ ಇಲಾಖೆಯಲ್ಲಿ ಹಿರಿಯ ವಾಹನ ಚಾಲಕರಾಗಿ ಸುಮಾರು 36 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಹೆಚ್. ಮೋಹನ ಇವರಿಗೆ ತೋಟಗಾರಿಕೆ ಉಪ ನಿರ್ದೇಶಕ ಹೆಚ್ ಆರ್ ನಾಯ್ಕ್ ಇವರ ಅಧ್ಯಕ್ಷತೆಯಲ್ಲಿ ಕಚೇರಿ ಅಧಿಕಾರಿ ಮತ್ತು ಸಿಬ್ಬಂದಿವರ್ಗದವರ ಸಮ್ಮಖದಲ್ಲಿ ಕಚೇರಿ ಸಭಾಂಗಣದಲ್ಲಿ ಸೇವಾ ನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ನಡೆಸಲಾಯಿತು.

Comments are closed.