ಕರಾವಳಿ

ದ.ಕ. ಜಿಲ್ಲೆಯಲ್ಲಿ ಇಂದಿನಿಂದ ಚಿನ್ನಭರಣ ಮಳಿಗೆಗಳು ಸ್ವಯಂಪ್ರೇರಿತ ಬಂದ್

Pinterest LinkedIn Tumblr

ಮಂಗಳೂರು, ಜುಲೈ 05 : ದ.ಕ ಜಿಲ್ಲೆಯಲ್ಲಿ ಕೊರೊನಾ ‌ಪ್ರಕರಣ ಹೆಚ್ಚಳ ಹಿನ್ನಲೆ ವ್ಯವಹಾರ ಸ್ಥಗಿತಗೊಳಿಸಲು ಇಂದಿನಿಂದ ಐದು ದಿನಗಳ ‌ಕಾಲ ಜಿಲ್ಲೆಯ ಜ್ಯುವೆಲ್ಲರಿಗಳನ್ನು ಬಂದ್ ಮಾಡಲು ದ.ಕ ಜಿಲ್ಲಾ ಸ್ವರ್ಣ ವ್ಯಾಪಾರ ಸಂಘ ನಿರ್ಧರಿಸಿವೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಜ್ಯುವೆಲ್ಲರಿ ಮಳಿಗೆಗಳು ಜುಲೈ 5ರಿಂದ ಜುಲೈ 9ರವರೆಗೆ ಬಂದ್‌‌ ಮಾಡಲು ತೀರ್ಮಾನ ಮಾಡಿವೆ.

ಕಾರ್ಪೊರೇಟ್ ಸ್ವರ್ಣಾಭರಣ ಮಳಿಗೆ ಸೇರಿದಂತೆ ಎಲ್ಲವೂ ಬಂದ್‌ ಆಗಲಿದ್ದು, ಇನ್ನು ಚಿನ್ನಾಭರಣ ಕಾಯ್ದಿರಿಸಿದವರಿಗೆ ಈಗಾಗಲೇ ಆಭರಣಗಳನ್ನು ಹಿಂದಿನ ದಿನವೇ ಕೊಡೋಯ್ಯಲ್ಲು ಸೂಚನೆ ನೀಡಲಾಗಿತ್ತು.

ಕೊರೊನಾ ಸೋಂಕು ತಡೆಗಟ್ಟುವ ಸಲುವಾಗಿ ದ.ಕ ಜಿಲ್ಲಾ ಸ್ವರ್ಣ ವ್ಯಾಪಾರ ಸಂಘ ಕೈಗೊಂಡಿರುವ ನಿರ್ಧರದಂತೆ ನಾವೆಲ್ಲಾ ಜುಲೈ 9ರವರೆಗೆ ನಮ್ಮ ಚಿನ್ನಭರಣ ಮಳಿಗೆಯನ್ನು ಬಂದ್ ಮಾಡಲು ಒಪ್ಪಿದ್ದೇವೆ ಎಂದು ಸ್ವರ್ಣೋಧ್ಯಮಿ ಶ್ರೀ ಅಶೋಕ್ ಶೆಟ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Comments are closed.