ಕರಾವಳಿ

ಕೊರೋನಾ ಕಾಟ- ಸಂಡೇ ಲಾಕ್‌ಡೌ‌ನ್‌ಗೆ ಉಡುಪಿ ಜಿಲ್ಲೆಯಲ್ಲಿ ಜನರ ಉತ್ತಮ ರೆಸ್ಫಾನ್ಸ್

Pinterest LinkedIn Tumblr

ಉಡುಪಿ: ಕೊರೋನಾ ಸೋಂಕಿನ ಹಿನ್ನೆಲೆ ಭಾನುವಾರ ಕಟ್ಟುನಿಟ್ಟಿನ ಲಾಕ್‌ಡೌನ್ ವಿಧಿಸಿ ಕರ್ನಾಟಕ ಸರ್ಕಾರಾ ಆದೇಶಿಸಿದ್ದು ಉಡುಪಿಯಲ್ಲಿ ಜನರು ಸ್ವಯಂಪ್ರೇರಿತವಾಗಿ ಬೆಂಬಲ ನೀಡಿದ್ದು ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ. ಎಲ್ಲಾ ಅಂಗಡಿಗಳು ಮತ್ತು ಹೊಟೇಲ್‌, ರೆಸ್ಟೋರೆಂಟ್‌ಗಳು ಮುಚ್ಚಲಾಯಿದ್ದು ಹಾಲು, ರೇಷನ್‌ ಮತ್ತು ಪತ್ರಿಕೆ ಅಂಗಡಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದೆ.

ಕೆಎ‌ಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ಸೇವೆಯನ್ನು ಸ್ಥಗಿತಗೊಂಡಿತ್ತು. ವಾಹನಗಳ ಓಡಾಟವಿಲ್ಲದೇ ರಸ್ತೆಗಳು ನಿರ್ಜನವಾಗಿದ್ದು ಅಗತ್ಯ ಕೆಲಸಗಳಿಗೆ ತೆರಳುವ ಮಂದಿ ಮಾತ್ರ ಸಂಚಾರ ಮಾಡುತ್ತಿದ್ದಾರೆ.

ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದ್ದು ಪ್ರತಿಯೊಂದು ವಾಹನವನ್ನು ಪರಿಶೀಲನೆ ನಡೆಸಲಾಗುತ್ತಿದೆ. ಕುಂದಾಪುರ, ಕಾರ್ಕಳ, ಬೈಂದೂರು, ಕಾಪುವಿನಲ್ಲಿಯೂ ಸಂಡೇ ಕರ್ಫ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.

Comments are closed.