ಕರಾವಳಿ

ಜು.4ರಿಂದ 30ರವರೆಗೆ ಪಿಲಿಕುಳ ನಿಸರ್ಗಧಾಮಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ

Pinterest LinkedIn Tumblr

ಮಂಗಳೂರು ಜುಲೈ 03 : ಕೊರೋನಾ ವೈರಾಣು ಕಾಯಿಲೆ – 2019 ರ ಸಮಸ್ಯೆ ಹಾಗೂ ಮಳೆಗಾಲದ ಕಾರಣದಿಂದ ಪಿಲಿಕುಳ ನಿಸರ್ಗಧಾಮಕ್ಕೆ ಸಂದರ್ಶಕರ ಭೇಟಿಯು ಅತ್ಯಲ್ಪವಾಗಿದ್ದು ಪಿಲಿಕುಳದ ಎಲ್ಲಾ ಆಕರ್ಷಣೆಗಳನ್ನು ಜುಲೈ 4 ರಿಂದ 31 ರವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಈ ಅವಧಿಯಲ್ಲಿ ಪಿಲಿಕುಳ ನಿಸರ್ಗಧಾಮದ ಪಾರ್ಕ್, ಜೈವಿಕ ಉದ್ಯಾನವನ, ಪಿಲಿಕುಲ ಪ್ರಾದೇಶಿಕ ವಿಜ್ಞಾನ ಕೇಂದ್ರ, 3ಡಿ 8ಕೆ ಪ್ಲಾನಿಟೋರಿಯಂ ಸೇರಿದಂತೆ ಎಲ್ಲಾ ಆಕರ್ಷಣೆಗಳ ವೀಕ್ಷಣೆಗೆ ಸಂದರ್ಶಕರ ಭೇಟಿಗೆ ಅವಕಾಶವಿರುವುದಿಲ್ಲ ಎಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

Comments are closed.