ಕರಾವಳಿ

ದ.ಕ. ಜಿಲ್ಲೆಯಲ್ಲಿ ಮತ್ತೊಮ್ಮೆ ಕೊರೋನಾಪಘಾತ -ಇಂದು 49 ಮಂದಿಯಲ್ಲಿ ಕೊರೊನಾ ಪತ್ತೆ : ರಾಜ್ಯದಲ್ಲಿ 918 ಮಂದಿಗೆ ಪಾಸಿಟಿವ್

Pinterest LinkedIn Tumblr

ದ.ಕ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 465ಕ್ಕೆ ಏರಿದೆ. ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 11,005ಕ್ಕೆ ಏರಿಕೆಯಾಗಿದೆ.

ಮಂಗಳೂರು, ಜೂನ್. 27: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೊಮ್ಮೆ ಕೊರೋನಾಪಘಾತವಾಗಿದ್ದು, ಇಂದು ಮತ್ತೆ 49 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕರ್ನಾಟಕದಲ್ಲಿ ಪ್ರತಿದಿನದ ಕೊರೋನ ಪಾಸಿಟಿವ್ ಪ್ರಕರಣಗಳ ಪೈಕಿ ಇಂದು ಅತೀ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಇಂದು ಮತ್ತೆ ಒಂದೇ ದಿನ ಬರೋಬ್ಬರಿ 918 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ.  

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ರಾಜ್ಯದಲ್ಲಿ ಸೋಮವಾರ ಒಂದೇ ದಿನ 918 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಿದೆ. ಇದರಲ್ಲಿ ದ.ಕ. ಜಿಲ್ಲೆಯಲ್ಲಿಬರೋಬ್ಬರಿ 49 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 596, ದಕ್ಷಿಣ ಕನ್ನಡ 49, ಕಲಬುರಗಿ 33, ಗದಗ 24, ಬಳ್ಳಾರಿ 24, ಧಾರವಾಡ 19, ಬೀದರ್ 17, ಹಾಸನ 14, ಕೋಲಾರ 14, ಉಡುಪಿ 14, ಯಾದಗಿರಿ 13, ಶಿವಮೊಗ್ಗ 13, ತುಮಕೂರು 13, ಚಾಮರಾಜನಗರ 13, ಮೈಸೂರು 12, ಮಂಡ್ಯ 12, ಕೊಡಗು 9, ದಾವಣಗೆರೆ 6, ರಾಯಚೂರು 6, ಬೆಂಗಳೂರು ಗ್ರಾಮಾಂತರ 5, ಉತ್ತರ ಕನ್ನಡ 2, ಬಾಗಲಕೋಟೆ 2, ಚಿಕ್ಕಮಗಳೂರು 2, ಚಿತ್ರದುರ್ಗ 2, ಬೆಳಗಾವಿ, ಚಿಕ್ಕಬಳ್ಳಾಪುರ, ಕೊಪ್ಪಳ ಹಾಗೂ ಹಾವೇರಿಯಲ್ಲಿ ತಲಾ 1 ಪ್ರಕರಣ ಪಾಸಿಟಿವ್ ಬಂದಿದೆ.

ರಾಜ್ಯದಲ್ಲಿ ಇಂದು 11 ಮಂದಿ ಕೊರೋನಾಕ್ಕೆ ಬಲಿ:

ಬೆಂಗಳೂರು ನಗರ ಜಿಲ್ಲೆಯಲ್ಲಿ ಮೂರು, ಬೀದರ್ ನಲ್ಲಿ ಮೂರು, ಕಲಬುರಗಿಯಲ್ಲಿ 2 ಹಾಗೂ ಧಾರವಾಡ, ಬಳ್ಳಾರಿ, ಗದಗದಲ್ಲಿ ತಲಾ ಒಂದು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 191ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಒಟ್ಟಾರೆ ರಾಜ್ಯದಲ್ಲಿ 11,923 ಕೊರೋನ ಸೋಂಕಿತರ ಪೈಕಿ 7,287 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 371 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 191 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 4,441 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಮೂರು ಐಎಲ್ ಐ ಹಾಗೂ 2 ಎಸ್ ಎ ಎ ಆರ್ ಐ (ಸಾರಿ) ಪ್ರಕರಣ ಪತ್ತೆ:

ಶನಿವಾರದಂದು 232 ಮಂದಿಯ ಕೊರೊನಾ ಪರೀಕ್ಷಾ ವರದಿ ಲಭ್ಯವಾಗಿದ್ದು, ಈ ಪೈಕಿ 183 ಮಂದಿಯ ವರದಿ ನೆಗೆಟಿವ್ ಆಗಿದೆ. ಜತೆಗೆ 49 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

11ರ ಬಾಲಕ ಸೇರಿ ನಾಲ್ವರು ಸೌದಿಯಿಂದ ಮರಳಿದವರಲ್ಲಿ ಸೋಂಕು ದೃಢಪಟ್ಟಿದೆ. ದುಬೈನಿಂದ ಮರಳಿದ ಇಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಪುತ್ತೂರಿನ ನಿವಾಸಿ 40ರ ಮಹಿಳೆಯಲ್ಲಿ ಐಎಲ್ ಐ ಪ್ರಕರಣ ಕಂಡುಬಂದಿದೆ. ಮಂಗಳೂರು ನಿವಾಸಿ 22 ವರ್ಷದ ಯುವತಿಯಲ್ಲಿ ಐಎಲ್ ಐ ಪ್ರಕರಣ ಕಂಡುಬಂದಿದೆ. 19ರ ಯುವಕ ಪುತ್ತೂರು ನಿವಾಸಿಯಾಗಿದ್ದು ಆತನಲ್ಲಿ ಐಎಲ್ ಐ ಪ್ರಕರಣ ದೃಢಪಟ್ಟಿದೆ. ಪುತ್ತೂರಿನ ಮತ್ತೊಬ್ಬ 80 ವರ್ಷದ ಮಹಿಳೆಯಲ್ಲಿ ಸಾರಿ ಪ್ರಕರಣ ಕಂಡುಬಂದಿದೆ. ದುಬೈ, ಕತಾರ್ ನಿಂದ ಆಗಮಿಸಿದ ಐವರಲ್ಲಿ ಸೋಂಕು ಇದೆ ಎನ್ನುವುದು ಖಚಿತವಾಗಿದೆ. ಶಾರ್ಜಾದಿಂದ ಮರಳಿದ ಇಬ್ಬರಲ್ಲಿ ಪಾಸಿಟಿವ್ ಇರುವುದು ಪರೀಕ್ಷೆಯಿಂದ ತಿಳಿದುಬಂದಿದೆ., 23 ವರ್ಷದ ಮಂಗಳೂರಿನ ವ್ಯಕ್ತಿಯಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ಮೂಲ ಪತ್ತೆ ಹಚ್ಚಲಾಗುತ್ತಿದೆ. ಮತ್ತೊಬ್ಬ ಕತಾರ್ ನಿಂದ ಮರಳಿದವರಲ್ಲಿ ಸೋಂಕು ದೃಢಪಟ್ಟಿದೆ. 44 ವರ್ಷದ ಬಂಟ್ವಾಳ ನಿವಾಸಿಯ ಮೂಲ ಪತ್ತೆಯಾಗಿಲ್ಲ.35 ವರ್ಷದ ಮಂಗಳೂರು ನಿವಾಸಿಯಲ್ಲಿ ಸಾರಿ ಪ್ರಕರಣ ಕಂದುಬಂದಿದೆ. 34 ವರ್ಷದ ಬೆಳ್ತಂಗಡಿ ನಿವಾಸಿಯ ಮೂಲ ಪತ್ತೆಹಚ್ಚಲಾಗುತ್ತಿದೆ.ಇನ್ನು ಕೆಲವರ ಮೂಲ ಪತ್ತೆಹಚ್ಚಲಾಗುತ್ತಿದೆ.

ಇನ್ನು ರೋಗಿ ಸಂಖ್ಯೆ 9590 ಸಂಪರ್ಕದಿಂದ ಬರೋಬ್ಬರಿ 13 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಈ ಪೈಕಿ 2 ವರ್ಷದ ಗಂಡು ಮಗು, 2 ವರ್ಷದ ಹೆಣ್ಣು ಮಗು ಸೇರಿಕೊಂಡಿದೆ 6ವರ್ಷದ ಬಾಲಕ ಸೇರಿದ್ದಾನೆ. ಇವರೆಲ್ಲರೂ ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು.

Comments are closed.