ಕರಾವಳಿ

ಮಂಗಳೂರು, ಪುತ್ತೂರಿನಲ್ಲಿ ಕ್ವಾರೆಂಟೈನ್ ಉಲ್ಲಂಘಿಸಿದ 54 ಮಂದಿಯ ವಿರುದ್ಧ ಕೇಸು ದಾಖಲು

Pinterest LinkedIn Tumblr

ಮಂಗಳೂರು ಜೂನ್ 26 : ದ.ಕ.ಜಿಲ್ಲೆಯ ಮಂಗಳೂರು ತಾಲೂಕು ಹಾಗೂ ಪುತ್ತೂರು ತಾಲೂಕಿನಲ್ಲಿ ಕ್ವಾರೆಂಟೈನ್ ನಿಯಮ ಉಲ್ಲಂಘಿಸಿದ 54 ಮಂದಿಯ ಮೇಲೆ ಜಿಲ್ಲೆಯಲ್ಲಿ ಕೇಸು ದಾಖಲಾಗಿದೆ.

ಕ್ವಾರೆಂಟೈನ್ ಉಲ್ಲಂಘಿಸಿ ಮನೆಯ ಹೊರಗಡೆ ಸಂಚರಿಸುತ್ತಿರುವುದು ರುಜುವಾದ ಹಿನ್ನೆಲೆಯಲ್ಲಿ ಇವರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ಈ ಪೈಕಿ 10 ಪ್ರಕರಣ ಪುತ್ತೂರು ತಾಲೂಕು ಹಾಗೂ ಉಳಿದ ಪ್ರಕರಣಗಳು ಮಂಗಳೂರು ತಾಲೂಕಿಗೆ ಸಂಬಂಧಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ವಾರೆಂಟೈನ್ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದ್ದು, ಪ್ರತಿಯೊಬ್ಬರ ಮೇಲೂನಿಗಾ ಇಡಲಾಗಿದೆ. ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿಗಳಲ್ಲದೆ, ಇತರೆ ಇಲಾಖೆ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಅಕ್ಕಪಕ್ಕದ ಮನೆಯವರಲ್ಲೂ ಕ್ವಾರೆಂಟೈನ್ ಇರುವವರ ಮೇಲೆ ನಿಗಾ ಇಡಲು ತಿಳಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಕ್ವಾರೆಂಟೈನ್ ನಿಗಾ ಕಾರ್ಯದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.

ಕ್ವಾರೆಂಟೈನ್ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕೇಸು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.

Comments are closed.