ಕರಾವಳಿ

ತೋಟಗಾರಿಕೆ ಗಿಡಗಳು ಕಡಿಮೆ ದರದಲ್ಲಿ ಮಾರಾಟಕ್ಕೆ : ಆಸಕ್ತರು ಕೂಡಲೇ ಇಲ್ಲಿ ಸಂಪರ್ಕಿಸಿ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರ/ನರ್ಸರಿಗಳಲ್ಲಿ ಇಲಾಖಾ ದರಗಳನ್ವಯ ರೈತರಿಗೆ ವಿತರಣೆ ಮಾಡಲು ತೋಟಗಾರಿಕೆ ಗಿಡಗಳು ಲಭ್ಯವಿದ್ದು, ಅವುಗಳ ವಿವರ ಇಂತಿವೆ:

ಮಂಗಳೂರು ಜಿಲ್ಲಾ ನರ್ಸರಿ ತೋಟಗಾರಿಕೆ ಕ್ಷೇತ್ರದಲ್ಲಿ, ಗೇರು ಕಸಿ, ಅಡಿಕೆ, ತೋಟಗಾರಿಕಾ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ – ರಾಘವೇಂದ್ರ ದೂರವಾಣಿ ಸಂಖ್ಯೆ 9902056969.

ಪಡೀಲ್ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ, ಕೋಕೋ, ಕಾಳುಮೆಣಸು, ತೆಂಗು, ಪಪ್ಪಾಯ ತೋಟಗಾರಿಕೆ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ – ರೇಣುಕಾ ದೂರವಾಣಿ ಸಂಖ್ಯೆ 9480842518 .

ಬಂಟ್ವಾಳ ತಾಲೂಕಿನ ತುಂಬೆ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ, ತೆಂಗು, ನುಗ್ಗೆ, ಕಾಳುಮೆಣಸು, ಗೇರು, ಪಪ್ಪಾಯ, ಕೋಕೋ, ಮಲ್ಲಿಗೆ ತೋಟಗಾರಿಕೆ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ – ಹರೀಶ್ ದೂರವಾಣಿ ಸಂಖ್ಯೆ 9036893214 .

ಬಂಟ್ವಾಳ ತಾಲೂಕಿನ ವಿಟ್ಲ ತೋಟಗಾರಿಕೆ ಕ್ಷೇತ್ರದಲ್ಲಿ ನುಗ್ಗೆ, ಮಾವು, ಕಾಳುಮೆಣಸು ತೋಟಗಾರಿಕೆ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ – ರವಿರಾಜ್ ದೂರವಾಣಿ ಸಂಖ್ಯೆ 9449895062.

ಪುತ್ತೂರು ತಾಲೂಕಿನ ಕಬಕ ತೋಟಗಾರಿಕೆ ಕ್ಷೇತ್ರದಲ್ಲಿ ಗೇರು ಕಸಿ, ಅಡಿಕೆ, ನುಗ್ಗೆ, ಕಾಳುಮೆಣಸು, ತೆಂಗು ತೋಟಗಾರಿಕೆ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ – ರವಿರಾಜ್ ದೂರವಾಣಿ ಸಂಖ್ಯೆ 9449895062.

ಸುಳ್ಯ ತಾಲೂಕಿನ ಹೊಸಗದ್ದೆ ತೋಟಗಾರಿಕೆ ಕ್ಷೇತ್ರದಲ್ಲಿ ಗೇರು ಕಸಿ, ಕಾಳು ಮೆಣಸು, ಮಾವು, ಕೋಕೋ, ಅಡಿಕೆ, ತೆಂಗು ತೋಟಗಾರಿಕೆ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ – ಲೋಕೇಶ್ ದೂರವಾಣಿ ಸಂಖ್ಯೆ 9980546690.

ಬೆಳ್ತಂಗಡಿ ತಾಲೂಕಿನ ಮದ್ದಡ್ಕ ತೋಟಗಾರಿಕೆ ಕ್ಷೇತ್ರದಲ್ಲಿ ಗೇರು, ಅಡಿಕೆ, ತೆಂಗು, ಕಾಳುಮೆಣಸು, ಪಪ್ಪಾಯ, ನುಗ್ಗೆ ತೋಟಗಾರಿಕೆ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ – ಲಿಖಿತಾರಾಜ್ ದೂರವಾಣಿ ಸಂಖ್ಯೆ 9738515575 ಮತ್ತು ಲೋಕಯ್ಯ ದೂರವಾಣಿ ಸಂಖ್ಯೆ 9632303018.

ಬೆಳ್ತಂಗಡಿ ಕಚೇರಿ ನರ್ಸರಿ ಹಾಗೂ ಚಾರ್ಮಾಡಿ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ, ಕಾಳುಮೆಣಸು ತೋಟಗಾರಿಕೆ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ – ಮೈಲಾರ ದೂರವಾಣಿ ಸಂಖ್ಯೆ 9663247367 .

ಗಿಡಗಳು ಅಡಿಕೆ ಇಲಾಖಾ ದರ ರೂ. 20, ಕಸಿಗೇರು ಇಲಾಖಾ ದರ ರೂ. 25, ಕೋಕೋ ಇಲಾಖಾ ದರ ರೂ. 10, ಕಾಳುಮೆಣಸು ಇಲಾಖಾ ದರ ರೂ. 9, ತೆಂಗು ಇಲಾಖಾ ದರ ರೂ.60, ನುಗ್ಗೆ ಇಲಾಖಾ ದರ ರೂ. 8, ಪಪ್ಪಾಯ ಇಲಾಖಾ ದರ ರೂ 10, ಮಲ್ಲಿಗೆ ಇಲಾಖಾ ದರ ರೂ 12, ಮಾವು ಇಲಾಖಾ ದರ ರೂ. 32.

ಆಸಕ್ತ ರೈತರು ಸಂಬಂಧಪಟ್ಟ ಕ್ಷೇತ್ರ ಮತ್ತು ನರ್ಸರಿಗಳನ್ನು ಸಂಪರ್ಕಿಸಿ ತೋಟಗಾರಿಕೆ ಗಿಡಗಳನ್ನು ಪಡೆದುಕೊಳ್ಳಬಹುದು ಎಂದು ಮಂಗಳೂರು ತೋಟಗಾರಿಕೆ ಇಲಾಖೆ ಉಪನಿರ್ದೆಶಕರ ಪ್ರಕಟಣೆ ತಿಳಿಸಿದೆ.

Comments are closed.