ಕ್ರೀಡೆ

ವಿಶ್ವದ ನಂಬರ್ 1 ಆಟಗಾರ ಎನಿಸಿಕೊಳ್ಳಲು ಹಾರ್ದಿಕ್ ಪಾಂಡ್ಯಾಗೆ ನಾಯಕ ವಿರಾಟ್ ಕೊಹ್ಲಿ ಅಮೂಲ್ಯ ಸಲಹೆ ನೋಡಿ…

Pinterest LinkedIn Tumblr

ನವದೆಹಲಿ: ವಿಶ್ವದ ನಂಬರ್ 1 ಆಟಗಾರ ಎನಿಸಿಕೊಳ್ಳಲು ಹಾರ್ದಿಕ್ ಪಾಂಡ್ಯಾಗೆ ತಂಡದ ನಾಯಕ ವಿರಾಟ್ ಕೊಹ್ಲಿ ಅಮೂಲ್ಯ ಸಲಹೆ ನೀಡಿದ್ದಾರಂತೆ…!

ಟೀಂ ಇಂಡಿಯಾದ ಪ್ರಬಲ ಆಲ್ ರೌಂಡರ್ ಎಂದರೆ ಅದು ಹಾರ್ದಿಕ್ ಪಾಂಡ್ಯಾ.. ಆದರೆ ಪಾಂಡ್ಯಾ ಫಿಟ್ನೆಸ್ ಸಮಸ್ಯೆಯಿಂದಾಗಿ ತಂಡದಿಂದ ದೂರ ಉಳಿದಿದ್ದರೂ, ತಂಡದಲ್ಲಿ ಸ್ಥಾನ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಇಂತಹ ಹಾರ್ದಿಕ್ ಪಾಂಡ್ಯಾಗೆ ನಾಯಕ ವಿರಾಟ್ ಕೊಹ್ಲಿ ಅಮೂಲ್ಯವಾದ ಸಲಹೆ ನೀಡಿದ್ದು, ಉತ್ತಮ ಸ್ಥಾನಕ್ಕೆ ಸರಿಯಾದ ದಾರಿಯಲ್ಲಿ ಸಾಗು ಎಂದು ಹೇಳಿದ್ದಾರೆ.

ಈ ಬಗ್ಗೆ ಸ್ವತಃ ಹಾರ್ದಿಕ್ ಪಾಂಡ್ಯಾ ಹೇಳಿಕೊಂಡಿದ್ದು, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಅವರು ಯಶಸ್ವಿ ಆಟಗಾರರೆನಿಸಲು ಅವರಲ್ಲಿ ಆಟದ ಬಗೆಗಿದ್ದ ತುಡಿತವೇ ಕಾರಣ. ಅವರು ಎಂದೂ ನಂಬರ್ 2 ಆಟಗಾರರು ಎಂದಿನಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಅಂತೆಯೇ ನಂಬರ್ 2ಗೆ ಇಳಿದರೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ನಂಬರ್ 1 ಆಗಲು ಎನೆಲ್ಲಾ ಶ್ರಮ ಪಡಬೇಕೋ ಅದೆಲ್ಲವನ್ನೂ ಪಡುತ್ತಾರೆ. ಮತ್ತೆ ಹೊಸದಾಗಿ ಕಠಿಣಾಭ್ಯಾಸ ಮಾಡುತ್ತಾರೆ. ಅವರ ಕಠಿಣ ಪರಿಶ್ರಮವೇ ಇಂದು ಅವರನ್ನು ನಂಬರ್ 1 ಸ್ಥಾನದಲ್ಲಿರಿಸಿದೆ. ಎಂದು ಹೇಳಿದ್ದಾರೆ.

ಬರೋಡಾ ಕ್ರಿಕೆಟ್ ಅಸೋಸಿಯೇಶನ್‌ನ ಅಂಡರ್ 19 ತಂಡದ ಜೊತೆ ಸಂವಾದದಲ್ಲಿ ಪಾಲ್ಗೊಂಡಿದ್ದ ಹಾರ್ದಿಕ್ ಪಾಂಡ್ಯಾ, ತಾನು ಇತ್ತೀಚೆಗೆ ವಿರಾಟ್ ಕೊಹ್ಲಿ ಜೊತೆ ಮಾತನಾಡುವಾಗ, ನಿನ್ನ ಯಶಸ್ಸಿನ ಹಿಂದಿರುವ ಕಾರಣವೇನು ಎಂದು ಪ್ರಶ್ನಿಸಿದ್ದೆ. ಅದಕ್ಕೆ ಕೊಹ್ಲಿ ಮೌಲ್ಯಯುತ ಪ್ರತಿಕ್ರಿಯೆ ನೀಡಿದ್ದರು. ನಿನ್ನ ವರ್ತನೆ ಚೆನ್ನಾಗಿದೆ, ಎಲ್ಲವೂ ಚೆನ್ನಾಗಿದೆ. ಆದರೆ ನೀನು ದೊಡ್ಡ ಮಟ್ಟದವರೆಗೆ ಸ್ಥಿರ ಫಾರ್ಮ್ ಕಾಯ್ದುಕೊಳ್ಳಬೇಕಾಗುತ್ತದೆ. ಇದಕ್ಕೆ ನಿನ್ನಲ್ಲಿ ವಿಶ್ವ ನಂ.1 ಬ್ಯಾಟ್ಸ್‌ಮನ್ ಆಗುವ ಬಗ್ಗೆ ದೊಡ್ಡ ಹಸಿವಿರಬೇಕಾಗುತ್ತದೆ. ನಂಬರ್ 1 ಆಗಲೇಬೇಕು ಎಂದು ಯಾರನ್ನೋ ಕೆಳಗೆಳೆದು ನೀನು ನಂ.1 ಆಗುವುದಲ್ಲ. ಎಲ್ಲರಿಗೂ ಪ್ರೋತ್ಸಾಹ ನೀಡುತ್ತಲೇ ಸರಿಯಾದ ದಾರಿಯಲ್ಲಿ ನೀನು ಬೆಳೆದು ನಿಲ್ಲಬೇಕು, ವಿಶ್ವ ನಂ.1 ಅನ್ನಿಸಿಕೊಳ್ಳಬೇಕು. ನಿನ್ನ ಸ್ವಂತ ಪರಿಶ್ರಮ, ನಿನ್ನ ಸ್ವಂತ ಸಾಧನೆಯೊಂದಿಗೆ ನೀನು ವಿಶ್ವ ನಂ.1 ಬ್ಯಾಟ್ಸ್ ಮನ್ ಆಗುವ ಗುರಿ ಹೊಂದಿರಬೇಕು ಎಂದು ಕೊಹ್ಲಿ ಹೇಳಿದರು,’ ಎಂದು ಪಾಂಡ್ಯಾ ಹೇಳಿದ್ದಾರೆ.

ಎಂಎಸ್ ಧೋನಿ ನಾಯಕತ್ವದಲ್ಲಿ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ್ದ ಪಾಂಡ್ಯಾ, ಕೊಹ್ಲಿ ನಾಯಕತ್ವದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಅಲ್ಲದೆ ಐಪಿಎಲ್ ನಲ್ಲಿ ರೋಹಿತ್ ಶರ್ಮಾನಾಯಕತ್ವದ ಅಡಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು.

Comments are closed.