ಕರಾವಳಿ

ಕೊರೊನಾ ಸೋಂಕಿತ ವ್ಯಕ್ತಿಯ ಧಫನ ಕಾರ್ಯ ನಡೆಸಿದ ಶಾಸಕ ಖಾದರ್ : ವ್ಯಾಪಕ ಟೀಕೆ, ಆಕ್ರೋಷ

Pinterest LinkedIn Tumblr

ಮಂಗಳೂರು : ನಗರದಲ್ಲಿ ಸೋಂಕಿನಿಂದ ಮೃತ ಪಟ್ಟ ಕೊರೊನಾ ಸೋಂಕಿತ ವ್ಯಕ್ತಿಯ ಧಫನ ಕಾರ್ಯವನ್ನು ಮಂಗಳೂರು (ಉಳ್ಳಾಲ) ಶಾಸಕ ಯು.ಟಿ.ಖಾದರ್ ಅವರು ಯಾವೂದೇ ರೀತಿಯ ಮುನ್ನೇಚರಿಕೆಗಳನ್ನು ಮಾಡದೇ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಂಗಳೂರು ಶಾಸಕ ಯು.ಟಿ. ಖಾದರ್ ಅವರು ಕೇವಲ ಮಾಸ್ಕ್ ಧರಿಸಿ, ಪಿಪಿಇ ಕಿಟ್, ಸಾಮಾಜಿಕ ಅಂತರ, ಕೈಗೆ ಗ್ಲೌಸ್, ಸ್ಯಾನಿಟೈಜರ್ ಇದ್ಯಾವುದು ಇಲ್ಲದೆ ತಮ್ಮ ಸಮುದಾಯದ ಕೊರೊನಾ ಸೋಂಕಿತರು ಮೃತಪಟ್ಟ ಸಂದರ್ಭ ದಫನ ಕಾರ್ಯ ನಡೆಸಿರುವ ಬಗ್ಗೆ ಸ್ಥಳೀಯರ ವ್ಯಾಪಕ ಆಕ್ರೋಷಕ್ಕೆ ಕಾರಣವಾಗಿದೆ.

ಬೋಳಾರದ ವೃದ್ಧರೊಬ್ಬರು ಸೋಂಕಿಗೆ ಬಲಿಯಾಗಿದ್ದು, ಬೋಳಾರದ ಮಸೀದಿಯ ಖಬರ್ ಸ್ಥಾನದಲ್ಲಿ ಎಸ್‍ಡಿಪಿಐ, ಪಿಎಫ್‍ಐ ಕಾರ್ಯಕರ್ತರು ಶವದಫನ ಮಾಡುವಲ್ಲಿ ಸಹಕರಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದಿದ್ದ ಖಾದರ್ ಅವರು ಬರೀ ಮಾಸ್ಕ್ ಮಾತ್ರ ಧರಿಸಿ ಕೈಯಲ್ಲಿ ಹಾರೆ ಹಿಡಿದು ಶವದಫನ ಮಾಡಲು ನೆರವಾಗಿದ್ದಾರೆ.

ಶಾಸಕರು ಹಾರೆಯಿಂದ ಮಣ್ಣು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.. ಶಾಸಕರು ಸಾಮಾಜಿಕ ಅಂತರವಿಲ್ಲದೆ ನಿಂತಿದ್ದಲ್ಲದೆ ಕನಿಷ್ಟ ರಕ್ಷಾ ವ್ಯವಸ್ಥೆಯೂ ಇಲ್ಲದೆ ಸೋಂಕಿತರ ದಫನ ಕಾರ್ಯ ನಡೆಸಿದ್ದು ಸರಿಯೇ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

ಕೊರೊನಾವೈರಸ್ ಎಷ್ಟು ಮಾರಕ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಕೊರೊನಾ ಸೋಂಕಿತರ ಶವಸಂಸ್ಕಾರ, ಶವದಫನಕ್ಕೆ ಸಾಮಾನ್ಯವಾಗಿ ಹಲವಾರು ಕಡೆಗಳಲ್ಲಿ ವಿರೋಧ ವ್ಯಕ್ತವಾಗುತ್ತದೆ. ಮಂಗಳೂರಿನಲ್ಲಂತೂ ಕೊರೊನಾ ಸೋಂಕಿತರ ಶವಸಂಸ್ಕಾರಕ್ಕೆ ಎಷ್ಟೇ ಸರಿ ಅಡ್ಡಿಯಾದ ಘಟನೆ ನಡೆದಿದೆ, ಕೊರೋನಾ ಪ್ರಾರಂಭ ಹಂತದಲ್ಲಿ ಬೋಳೂರಿನ ಸ್ಮಶಾನದಲ್ಲಿ ಹಾಗೂ ವಾಮಂಜೂರಿನ ಸ್ಮಶಾನದಲ್ಲಿ ಶವಸಂಸ್ಕಾರದ ಕುರಿತು ಹೈಡ್ರಾಮವೇ ನಡೆದಿದ್ದು ಇದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು.

ಆದರೆ ಇದಕ್ಕೆಲ್ಲ ಸೆಡ್ಡು ಹೊಡೆದಿರುವ ಮಂಗಳೂರು ಶಾಸಕ ಯು.ಟಿ. ಖಾದರ್ ಅವರು ಕೇವಲ ಮಾಸ್ಕ್ ಧರಿಸಿ, ಪಿಪಿಇ ಕಿಟ್, ಸಾಮಾಜಿಕ ಅಂತರ, ಕೈಗೆ ಗ್ಲೌಸ್, ಸ್ಯಾನಿಟೈಜರ್ ಇದ್ಯಾವುದರ ಗೊಡವೆಯೂ ಇಲ್ಲದೆ ತಮ್ಮ ಸಮುದಾಯದ ಕೊರೊನಾ ಸೋಂಕಿತರು ಮೃತಪಟ್ಟ ಸಂದರ್ಭ ದಫನ ಕಾರ್ಯ ನಡೆಸಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.

ಶಾಸಕರು ಸದಾ ಜನರ ಮಧ್ಯೆ ಇರುವವರು, ಕೊರೊನಾ ಮಧ್ಯೆಯೂ ನಾನಾ ಕಾರ್ಯಕ್ರಮಗಳಲ್ಲಿ ಓಡಾಡುವರರು ಹೀಗಾಗಿ ಇವರೇ ಪಿಪಿಇ ಕಿಟ್ ಧರಿಸದೆ ದಫನಕಾರ್ಯದಲ್ಲಿ ಭಾಗವಹಿಸಿ ಜನರ ಮಧ್ಯೆ ಹೋದರೆ ಹೇಗೆ ಎಂಬ ಪ್ರಶ್ನೆಯನ್ನು ಜನಸಾಮಾನ್ಯರು ಕೇಳುತ್ತಿದ್ದು, ಇದಕ್ಕೆಲ್ಲಾ ಖುದ್ದು ಶಾಸಕರಾದ ಯು.ಟಿ ಖಾದರ್ ಅವರೇ ಉತ್ತರಿಸಬೇಕಿದೆ.

Comments are closed.