ಕರಾವಳಿ

ಮಂಗಳೂರಿನಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ : ನಭೋ ಮಂಡಲದ ಚಮತ್ಕಾರಕ್ಕೆ ಬೆರಗಾದ ಜನರು

Pinterest LinkedIn Tumblr

ಮಂಗಳೂರು: ಮಂಗಳೂರಿನ ಆಕಾಶಭವನದ ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಸೂರ್ಯಗ್ರಹಣದ ವೀಕ್ಷಣೆ ಮತ್ತು ವಿಶ್ಲೇಷಣೆ ಕಾರ್ಯಕ್ರಮ ಆಕಾಶಭವನದ ಗೊಲ್ಲರಬೆಟ್ಟಿನ ಶಿಕ್ಷಕ ಪ್ರೇಮನಾಥ್ ಮರ್ಣೆ ಅವರ ನಿವಾಸದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಆಸಕ್ತರು ಭಾಗವಹಿಸಿದ್ದರು.

ಕಲಾವಿದ, ವೈಜ್ಞಾನಿಕ ಶಿಕ್ಷಕರಾಗಿರುವ ಅರವಿಂದ ಕುಡ್ಲ ಅವರು ಮುಖ್ಯ ಅತಿಥಿಗಳಾಗಿದ್ದರು. ನಭೋಮಂಡಲದ ವೈಜ್ಞಾನಿಕ ಕೌತುಕಗಳು, ಸೂರ್ಯ-ಚಂದ್ರರ ಪಥಚಲನೆ, ಸೂರ್ಯಗ್ರಹಣಗಳ ಬಗ್ಗೆ ಅವರು ಸಮಗ್ರ ಮಾಹಿತಿ ನೀಡಿದರು.

ಕೆಲ ಕಾಲ ಮೋಡ ಕವಿದ ವಾತಾವರಣದಿಂದಾಗಿ ಸೂರ್ಯಗ್ರಹಣ ವೀಕ್ಷಣೆಗೆ ಅಡ್ಡಿಯಾಯಿತು. ಬಳಿಕ ಬಾನಿನಲ್ಲಿ ಸೂರ್ಯಗ್ರಹಣದ ವೀಕ್ಷಣೆ ಮಾಡಲಾಯಿತು. ವಿಜ್ಞಾನ ತಂತ್ರಜ್ಞಾನ ಇಲಾಖೆಯಿಂದ ಮಾನ್ಯತೆ ಪಡೆದ ಕನ್ನಡಕಗಳಿಂದ ಆಕಾಶ ವೀಕ್ಷಣೆ ಮಾಡಿದರು.

ಮಂಗಳೂರಿನಲ್ಲಿ ಭಾಗಶಃ ಸೂರ್ಯಗ್ರಹಣ ನಡೆದಿದ್ದು, ಬೆಳಿಗ್ಗೆ 10-04ರಿಂದ 1-22ರ ವರೆಗೆ ಭಾಗಶಃ ಸೂರ್ಯಗ್ರಹಣ ನಡೆದಿದ್ದು, 11-36-ಕ್ಕೆ ಗರಿಷ್ಠ ಸೂರ್ಯಗ್ರಹಣ ನಡೆಯಿತು.

ಚಿಂತನ ಸಾಂಸ್ಕೃತಿಕ ಬಳಗದ ಸಂಯೋಜಕರಾದ ಶಿಕ್ಷಕ ಪ್ರೇಮನಾಥ್ ಮರ್ಣೆ, ನ್ಯಾಯವಾದಿ ಸುಕೇಶ್ ಕುಮಾರ್ ಶೆಟ್ಟಿ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments are closed.