ಕರಾವಳಿ

ಆಕ್ರಮವಾಗಿ ಎಮ್ಮೆ ಸಾಗಾಟ ಮಾಡುತ್ತಿದ್ದ ರೌಡಿ ಶೀಟರ್‌ನನ್ನು ತಡೆದ ಆರು ಮಂದಿಯ ಬಂಧನ

Pinterest LinkedIn Tumblr

ಮಂಗಳೂರು : ಮಿನಿ ಟೆಂಪೋದರಲ್ಲಿ ಅಕ್ರಮವಾಗಿ ಎಮ್ಮೆ ಸಾಗಾಟ ಮಾಡುತ್ತಿದ್ದ ಪ್ರಕರಣದ ಆರೋಪಿಯನ್ನು ಉರ್ವಾಸ್ಟೋರ್ ಸಮೀಪದ ಕೊಟ್ಟಾರ ಬಳಿ ತಡೆದು ಆರೋಪಿ ರೌಡಿ ಶೀಟರ್ ನನ್ನು ಪೊಲೀಸರಿಗೆ ಒಪ್ಪಿಸಿದ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಾಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿನಾಂಕ 14-06-2020 ರಂದು ಬೆಳಿಗ್ಗೆ 05.30 ಗಂಟೆಗೆ ಕೆ.ಎ 20 ಡಿ 3849 ನೇ ಅಶೋಕ ಲೈಲ್ಯಾಂಡ್ ಮಿನಿ ಟೆಂಪೋದಲ್ಲಿ ರೌಡಿ ಶೀಟರ್ ಮಹಮ್ಮದ್ ಹನೀಫ್ ಜೋಕಟ್ಟೆ 4 ಎಮ್ಮೆಗಳನ್ನು ಕುದ್ರೋಳಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದಾಗ ಉರ್ವಾ ಠಾಣಾ ವ್ಯಾಪ್ತಿಯ ಕೊಟ್ಟಾರ ಇನ್ಪೋಸಿಸ್ ಬಳಿಯ ಬಸ್ ನಿಲ್ದಾಣದ ಎದುರುಗಡೆ 6 ಜನ ಅಪರಿಚಿತ ಯುವಕರ ಗುಂಪು ವಾಹನವನ್ನು ನಿಲ್ಲಿಸಿ ಹಲ್ಲೆ ಮಾಡಿದ ಬಗ್ಗೆ ಉರ್ವ ಠಾಣೆಯಲ್ಲಿ ಮೊಕ್ಕದಮೆ ನಂ 32/2020 ಕಲಂ 143, 147, 323, 504, 427, 149 IPC ರಂತೆ ಪ್ರಕರಣ ದಾಖಲಿಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಪ್ರೀತಂ ಶೆಟ್ಟಿ, ಕಾಟಿಪಳ್ಳ ಮಂಗಳೂರು, ಭವಿತ್ ಶೆಟ್ಟಿ, ಶಕ್ತಿ ನಗರ ಮಂಗಳೂರು, ಶ್ರೀನಿವಾಸ, ಕಾಟಿಪಳ್ಳ ಮಂಗಳೂರು, ಜಯಪ್ರಶಾಂತ, ಶಕ್ತಿ ನಗರ ಮಂಗಳೂರು , ಆಶೀತ್, ಕಾಟಿಪಳ್ಳ ಮಂಗಳೂರು, ಸಚೀನ , ಶಕ್ತಿ ನಗರ ಮಂಗಳೂರು ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.