ಕರಾವಳಿ

ಅಕ್ರಮ ಎಮ್ಮೆ ಸಾಗಾಟ : ಬಜರಂಗದಳದ ಕಾರ್ಯಕರ್ತರು ಹಿಡಿದು ಕೊಟ್ಟ ಆರೋಪಿ ರೌಡಿ ಶೀಟರ್

Pinterest LinkedIn Tumblr

ಮಂಗಳೂರು : ಮಿನಿ ಟೆಂಪೋದರಲ್ಲಿ ಅಕ್ರಮವಾಗಿ ಎಮ್ಮೆ ಸಾಗಾಟ ಮಾಡುತ್ತಿದ್ದ ಪ್ರಕರಣದ ಆರೋಪಿಯನ್ನು ಉರ್ವಾಸ್ಟೋರ್ ಸಮೀಪದ ಕೊಟ್ಟಾರ ಬಳಿ ಸಂಘಪರಿವಾರದ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಪ್ರಕರಣದ ಆರೋಪಿ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಾಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿನಾಂಕ 14-06-2020 ರಂದು ಬೆಳಿಗ್ಗೆ 05.30 ಗಂಟೆಗೆ ಕೆ.ಎ 20 ಡಿ 3849 ನೇ ಅಶೋಕ ಲೈಲ್ಯಾಂಡ್ ಮಿನಿ ಟೆಂಪೋದರಲ್ಲಿ ಆರೋಪಿತನು ಜೋಕಟ್ಟೆ ಪರಿಸರದಿಂದ ಕಳವು ಮಾಡಿದ 4 ಎಮ್ಮೆಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ ಕುದ್ರೋಳಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿಯಂತೆ ಉರ್ವಾ ಠಾಣಾ ವ್ಯಾಪ್ತಿಯ ಕೊಟ್ಟಾರ ಇನ್ಪೋಸಿಸ್ ಬಳಿಯ ಬಸ್ ನಿಲ್ದಾಣದ ಎದುರುಗಡೆಯಿಂದ ವಶಕ್ಕೆ ಪಡೆದು ಹೆಚ್.ಸಿ 956 ನಾರಾಯಣ ಎಂಬವರು ಠಾಣೆಯಲ್ಲಿ ನೀಡಿದ ವರದಿ ಆಧಾರದಲ್ಲಿ ಆರೋಪಿ ಮಹಮ್ಮದ್ ಹನೀಫ್ ಎಂಬಾತನ ವಿರುದ್ಧ ಉರ್ವಾ ಠಾಣಾ ಮೊ.ನಂಬ್ರ : 31-2020 ಕಲಂ. 11 (1), 20 The Prevention of Cruelty to Animal Act 1960 & 4,8,9 Karnataka Prevention of Cow Slaughter & Cattle Preservation Act.1964 ಮತ್ತು 379 ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದೆ.

ಆರೋಪಿ ಮಹಮ್ಮದ್ ಹನೀಫ್ ರೌಡಿ ಸ್ವಭಾವದವನಾಗಿದ್ದು ಈತನು ಪಣಂಬೂರು ಠಾಣೆಯಲ್ಲಿ ರೌಡಿ ಶೀಟರ್ ಆಗಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮಹಮ್ಮದ್ ಹನೀಫ್  ವಿರುದ್ದ ದಾಖಲಾದ ಪ್ರಕರಣಗಳು ಈ ಕೆಳಗಿನಂತಿದೆ :

01, ಬ್ರಹ್ಮಾವರ ಠಾಣಾ.ಮೊ,ನಂಬ್ರ : 189/2019 ಕಲಂ: 8,9,11. Karnataka Prevention of Cow Slaughter & Cattle Preservation Act ಮತ್ತು ಕಲಂ : 11 (1), (D) The Prevention of Cruelty to Animal Act 1960 ಮತ್ತು ಕಲಂ ; 192 (A) IMV ACT,

02, ಸಕಲೇಶಪುರ ಠಾಣಾ ಮೊ.ನಂಬ್ರ : 152/2019 ಕಲಂ: 8,11 Karnataka Prevention of Cow Slaughter & Cattle Preservation Act. ಮತ್ತು ಕಲಂ: 192 IMV ACT.

03, ಉಪ್ಪಿನಂಗಡಿ ಠಾಣಾ ಮೊ.ನಂಬ್ರ : 144/2019 ಕಲಂ: 4,5,9,11 Karnataka Prevention of Cow Slaughter & Cattle Preservation Act. ಮತ್ತು ಕಲಂ: 177, 192 IMV ACT.

04, ಪಣಂಬೂರು ಠಾಣಾ ಮೊ.ನಂಬ್ರ :* 45/19 ಕಲಂ: 4,5,8,9,11,12 Karnataka Prevention of Cow Slaughter & Cattle Preservation Act. ಮತ್ತು 379 ಐಪಿಸಿ.

ಮಂಗಳೂರಿನಲ್ಲಿ ಭಜರಂಗದಳದ ಮಿಂಚಿನ ಕಾರ್ಯಾಚರಣೆ : ಅಕ್ರಮವಾಗಿ ಸಾಗಿಸುತ್ತಿದ್ದ 4 ಕೋಣಗಳ ರಕ್ಷಣೆ

Comments are closed.