ಕರಾವಳಿ

ಮಂಗಳೂರಿನಲ್ಲಿ ಭಜರಂಗದಳದ ಮಿಂಚಿನ ಕಾರ್ಯಾಚರಣೆ : ಅಕ್ರಮವಾಗಿ ಸಾಗಿಸುತ್ತಿದ್ದ 4 ಕೋಣಗಳ ರಕ್ಷಣೆ

Pinterest LinkedIn Tumblr

ಮಂಗಳೂರು,ಜೂನ್. 14 : ಮಂಗಳೂರು ಕಸಾಯಿಖಾನೆಗೆ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಮಿನಿ ಟೆಂಪೋವನ್ನು ಭಜರಂಗದಳದ ಕಾರ್ಯಕರ್ತರು ತಡೆದು ಅದರಲ್ಲಿದ್ದ 4 ಕೋಣಗಳನ್ನು ರಕ್ಷಣೆ ಮಾಡಿ, ಓರ್ವ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಸುಕಿನ ವೇಳೆ ನಗರದ ಕೊಟ್ಟಾರ ಬಳಿ ನಡೆದಿದೆ.

ನಗರದಲ್ಲಿ ಅಕ್ರಮ ಗೋಸಾಗಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭಜರಂಗದಳದ ಕಾರ್ಯಕರ್ತರು ಇಂದು ನಸುಕಿನ ಜಾವ ಕೊಟ್ಟಾರ ಬಳಿ ದಾಳಿ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಮಿನಿ ಟೆಂಪೋದಲ್ಲಿದ್ದ 4 ಕೋಣಗಳನ್ನು ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ. ಮಾತ್ರವಲ್ಲದೇ ಓರ್ವ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಉಡುಪಿ ಯಿಂದ ಮಂಗಳೂರು ಕಸಾಯಿಖಾನೆಗೆ ಅಕ್ರಮವಾಗಿ ಈ ಕೋಣಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಉರ್ವ ಪೊಲೀಸ್ ಠಾಣೆಗೆ ಸಮೀಪದಲ್ಲೇ ಈ ಘಟನೆ ನಡೆದಿದ್ದು, ಆದರೆ ಈ ಬಗ್ಗೆ ಪೊಲೀಸರಿಗೆ ಯಾವೂದೇ ಮಾಹಿತಿ ಇಲ್ಲದಿರುವುದು ಆಶ್ಚರ್ಯವನ್ನುಂಟು ಮಾಡಿದೆ ಎನ್ನುತ್ತಾರೆ ಸ್ಥಳೀಯರು.

ಘಟನೆ ಬಗ್ಗೆ ಬಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಉರ್ವ ಪೊಲೀಸರು ಸ್ಥಳಕ್ಕೆ ಧಾವಿಸಿ ಕೋಣಗಳು ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಗೋಹತ್ಯಾ ಕಾನೂನು ಜಾರಿಗೆ ಆಗ್ರಹ :

ಬಜರಂಗದಳದ ಕಾರ್ಯಕರ್ತರು ಅಕ್ರಮ ಗೋಸಾಗಾಟ ತಡೆಯಲು ಮತ್ತೆ ಮುಂದಾಗಿದ್ದು, ಸರಕಾರ ಮತ್ತು ಪೋಲೀಸ್ ಇಲಾಖೆಗೆ ಸವಾಲಾಗಿದೆ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಯಾವೂದೇ ದಾಳಿ ಕಾರ್ಯಾಚರಣೆ ಮಾಡದೇ ಮೌನವಾಗಿದ್ದ ಸಂಘಟನೆ ಇದೀಗ ಮತ್ತೆ ಚುರುಕಾಗಿ ಕಾರ್ಯಾಚರಣೆಗೆ ಮುಂದಾಗಿದೆ.

ಮಾತ್ರವಲ್ಲದೇ ಪೋಲೀಸ್ ಇಲಾಖೆ ಇಂತಹ ಪ್ರಕರಣಗಳನ್ನು ಗಂಬೀರವಾಗಿ ಪರಿಗಣಿಸಿ ಅಮಾನುಷ ವಾಗಿ ಕೊಂಡೊಯ್ಯುವ ದನಗಳನ್ನು ಹಿಡಿಯಬೇಕು ಮತ್ತು ಇಂತಹ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಹಾಗೂ ಸರಕಾರ ಗೋಹತ್ಯಾ ಕಾನೂನು ಜಾರಿಗೆ ತರಬೇಕು ಎಂದು ಬಜರಂಗದಳ ಆಗ್ರಹಿಸಿದೆ.

Comments are closed.