ಕ್ರೀಡೆ

ಇಲ್ಲೊಬ್ಬ ಸಿಕ್ಸ್​​ ಪ್ಯಾಕ್​​ನಲ್ಲಿ ಮಿಂಚುತ್ತಿದ್ದಾನೆ 6 ವರ್ಷದ ಪೋರ! ಈತನನ್ನು ನೋಡಿದ ನೆಟ್ಟಿಗರು ಫಿದಾ…

Pinterest LinkedIn Tumblr

ಟೆಹರಾನ್: ಅನೇಕರು ಸಿಕ್ಸ್​ ಪ್ಯಾಕ್​ಗಾಗಿ ಜಿಮ್​ನಲ್ಲಿ ಹಗಲು-ರಾತ್ರಿ ವರ್ಕೌಟ್​​ ಮಾಡುತ್ತಾರೆ. ಇನ್ನು ಕೆಲವರು ಪ್ರೊಟೀನ್​ಗಳನ್ನು ತಿನ್ನುತ್ತಾ, ಸಿಕ್ಸ್​ಪ್ಯಾಕ್​ ಒಂದಿದ್ದರೆ ಸಾಕು ಎಂದುಕೊಂಡು ಜಿಮ್​ ಹೋಗುವವರಿದ್ದಾರೆ. ಆದರೆ ಇಲ್ಲೊಬ್ಬ ಪುಟ್ಟ ಪೋರನ ಸಿಕ್ಸ್​ ಪ್ಯಾಕ್​ ನೋಡಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ!.

ಆರು ವರ್ಷದ ಪೋರ ಆರ್ತ್ ಹುಸೈನಿ ಸಿಕ್ಸ್ ಪ್ಯಾಕ್ ಹಾಗೂ ವರ್ಕೌಟ್‍ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

https://www.instagram.com/p/B7bDm6kjgCY/?utm_source=ig_embed

ಇರಾನ್‍ನ ಬಾಬೋಲ್ ನಗರದಲ್ಲಿ ವಾಸಿಸುತ್ತಿರುವ ಆರ್ತ್ ಹುಸೈನಿ ಸಿಕ್ಸ್ ಪ್ಯಾಕ್, ವರ್ಕೌಟ್ ಹಾಗೂ ಸ್ಟಂಟ್‍ನಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ 40 ಲಕ್ಷಕ್ಕೂ ಹೆಚ್ಚು ಜನರು ಆರ್ತ್ ಹುಸೈನಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಆರ್ತ್ ಪ್ರತಿಯೊಂದು ಪೋಸ್ಟ್ ಗೂ 10 ಲಕ್ಷಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆಯುತ್ತಾರೆ.

https://www.instagram.com/p/B_AS4tADu1V/?utm_source=ig_embed

ಆರ್ತ್ ತಂದೆ ಮೊಹಮ್ಮದ್ ಅವರು ಮಗನಿಗೆ ಚಿಕ್ಕ ವಯಸ್ಸಿನಲ್ಲಿಯೇ ತರಬೇತಿಯನ್ನು ಪ್ರಾರಂಭಿಸಿದರು. ಆರ್ತ್ ತನ್ನ 9 ತಿಂಗಳ ವಯಸ್ಸಿನಲ್ಲಿ ಜಿಮ್ನಾಸ್ಟಿಕ್ಸ್ ಮಾಡಲು ಆರಂಭಿಸಿದ್ದ. ಎರಡನೇ ವರ್ಷಕ್ಕೂ ಮುನ್ನವೇ ಬಾಲಕ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದ. ಸದ್ಯ ಸಿಕ್ಸ್ ಪ್ಯಾಕ್ ನಿಂದ ನೆಟ್ಟಿಗರ ಮನ ಗೆದ್ದಿದ್ದಾನೆ.

https://www.instagram.com/p/B-4gjghDl8L/?utm_source=ig_embed

ಆರ್ತ್ ಇಂಗ್ಲೆಂಡ್‍ನ ಲಿವರ್‍ಪೂಲ್ ಅಕಾಡೆಮಿಯಲ್ಲಿ ಫುಟ್ಬಾಲ್ ತರಬೇತಿ ಪಡೆಯುತ್ತಿದ್ದಾರೆ. ಮಗನಲ್ಲಿನ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿದ ಮೊಹಮ್ಮದ್ ಅವರು ಆರ್ತ್ ಹೆಸರಿನಲ್ಲಿ ಇನ್‍ಸ್ಟಾಗ್ರಾಮ್ ಖಾತೆ ತೆರೆದಿದ್ದರು. ಬಾಲಕ ಜಿಮ್ನಾಸ್ಟಿಕ್ಸ್, ವರ್ಕೌಟ್ ನೋಡಿದ ಲಕ್ಷಾಂತರ ನೆಟ್ಟಿಗರು ಆತನನ್ನು ಫಾಲೋ ಮಾಡಲು ಆರಂಭಿಸಿದರು.

ಮೊಹಮ್ಮದ್ ಅವರು ಮಗನಿಂದ ಹಣ ಸಂಪಾದಿಸಲು ಹೀಗೆ ಮಾಡುತತ್ತಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಮೊಹಮ್ಮದ್, ಮಗ ಯಾವಾಗಲೂ ಅಥ್ಲೆಟಿಕ್ಸ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿರುತ್ತಾನೆ. ಅವನ ಇಷ್ಟದ ವಿಷಯಗಳಲ್ಲಿ ನಾನು ತಂದೆಯಾಗಿ ಮಾತ್ರ ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಲಿಯೋನೆಲ್ ಮೆಸ್ಸಿಯ ಅಭಿಮಾನಿ:
ಆರ್ತ್ ವಾಲ್ ಕ್ಲೈಂಬಿಂಗ್ ಕಲೆಯಲ್ಲೂ ಪರಿಣತಿ ಹೊಂದಿದ್ದಾರೆ. ಈಗ ಅವರ ಕನಸು ಬೆಳೆದು ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಪರ ಆಡವುದಾಗಿದೆ. ಆರ್ತ್ ಅವರ ನೆಚ್ಚಿನ ಆಟಗಾರರಲ್ಲಿ ಲಿಯೋನೆಲ್ ಮೆಸ್ಸಿ ಕೂಡ ಒಬ್ಬರಾಗಿದ್ದು, ಅವರಂತೆ ಆಡಲು ಬಯಸಿದ್ದಾರೆ.

Comments are closed.