ಕರಾವಳಿ

ಮಂಗಳೂರಿನ ಕದ್ರಿ ಠಾಣಾ ವ್ಯಾಪ್ತಿಯಲ್ಲಿ 17 ವರ್ಷದ ಯುವತಿ ನಾಪತ್ತೆ

Pinterest LinkedIn Tumblr

ಮಂಗಳೂರು ಜೂನ್ 16 : ಮಂಗಳೂರಿನಲ್ಲಿ 17 ವರ್ಷದ ಯುವತಿ ನಾಪತ್ತೆಯಾಗಿದ್ದು, ಈ ಬಗ್ಗೆ ಮಂಗಳೂರು ಪೂರ್ವ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ಯಾರೆಲ್ (17) ಎಂಬ ಯುವತಿ ಜೂನ್ 13ರಂದು ರಾತ್ರಿ 11 ಗಂಟೆಗೆ ತನ್ನ ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಎಂದು ತಿಳಿಸಿ ಹೋದವಳು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾಳೆ.

ಕಾಣೆಯಾದ ಯುವತಿಯ ಚಹರೆ ಇಂತಿವೆ:

ಎತ್ತರ 5.2, ಬಿಳಿ ಬಣ್ಣ, ದುಂಡು ಮುಖ, ಬೆಕ್ಕು ಕಣ್ಣು, ಕೆಂಪು ಕೂದಲು ಧರಿಸಿರುವ ಬಟ್ಟೆ-ಹಳದಿ ಕಲರ್ ಟಿ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್. ಮಾತನಾಡುವ ಭಾಷೆ-ಕನ್ನಡ, ತುಳು.

ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 2220520, 2220800-2220801 ನ್ನು ಸಂಪರ್ಕಿಸಲು ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.

Comments are closed.