ಕರಾವಳಿ

ಹೆತ್ತಮ್ಮನ ನಿಧನದಿಂದ ಮನನೊಂದ ಮಗನಿಗೂ ಹೃದಯಾಘಾತ; ಕುಂದಾಪುರದಲ್ಲಿ ದಾರುಣ ಘಟನೆ

Pinterest LinkedIn Tumblr

ಕುಂದಾಪುರ: ವಯೋಸಹಜವಾಗಿ ಮೃತಪಟ್ಟ ತಾಯಿಯ ನಿಧನ ಸುದ್ದಿ ಕೇಳಿ ಮಗನೂ ಹೃದಯಾಪಘಾತದಿಂದ ಮೃತಪಟ್ಟ ಘಟನೆ ಕುಂದಾಪುರದಲ್ಲಿ ನಡೆದಿದೆ.

ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಬಳಿಯ ಮಹಾರಾಜ್ ಜುವೆಲ್ಲರ್‍ಸ್ ಮಾಲಿಕ ದಿ.ರಮೇಶ್ ಶೇಟ್ ಪತ್ನಿ ಶಕುಂತಲಾ ಶೇಟ್ (82)ಸ್ವಗೃಹದಲ್ಲಿ ಮೃತಪಟ್ಟಿದ್ದು, ತಾಯಿ ಮೃತಪಟ್ಟ ನೋವಲ್ಲಿದ್ದ ಮಗ ಪ್ರಶಾಂತ್ ಶೇಟ್ (46) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶಕುಂತಲಾ ಅವರಿಗೆ 4 ಗಂಡು ಹಾಗೂ 2 ಪುತ್ರಿಯರಿದ್ದು, ಅವರು ಗಂಡು ಮಕ್ಕಳೊಂದಿಗೆ ನಗರದಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಪ್ರಶಾಂತ್ 3 ನೇ ಪುತ್ರರಾಗಿದ್ದು, ಅವಿವಾಹಿತರಾಗಿದ್ದರು. ಕುಂದಾಪುರದ ಜುವೆಲ್ಲರ್ಸ್ ಅಸೋಸೀಯೇಶನ್ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದ ಅವರು ಅಪಾರ ಮಿತ್ರ ವರ್ಗವನ್ನು ಹೊಂದಿದ್ದರು.

ಶನಿವಾರ ನಗರದ ಚಿಕ್ಕನ್‌ಸಾಲ್ ರಸ್ತೆಯಲ್ಲಿ ಇರುವ ಹಿಂದೂ ಸ್ಮಶಾನದಲ್ಲಿ ತಾಯಿ ಹಾಗೂ ಮಗನ ಅಂತ್ಯ ಸಂಸ್ಕಾರ ಸಂಸ್ಕಾರ ಒಟ್ಟಾಗಿ ನಡೆಯಿತು. ಚಿನ್ನದ ಅಂಗಡಿಗಳು ಮೃತರ ಗೌರವಾರ್ಥವಾಗಿ ಅಂಗಡಿ ಬಂದ್ ಮಾಡಿದ್ದರು.

Comments are closed.