ಕರಾವಳಿ

ಮನೆಯಂಗಳದಲ್ಲಿ ಆಡುವಾಗ ಕವರ್ ಡ್ರೈವ್ ಮಾಡಿ ಸುದ್ದಿ ಮಾಡಿದ ಕಾರ್ಕಳ ಯುವತಿ!

Pinterest LinkedIn Tumblr

ಉಡುಪಿ: ಲಾಕ್ ಡೌನ್ ಸಮಯದಲ್ಲಿ ಮನೆಯಂಗಳದಲ್ಲಿ ಕ್ರಿಕೆಟ್‌ ಆಡುವಾಗ ಯುವತಿ ಹೊಡೆದ ಕವರ್‌ ಡ್ರೈವ್‌ ಶಾಟ್ ವಿಡಿಯೋ ಸಖತ್‌ ವೈರಲ್‌ ಆಗಿ ವಿಶ್ವದ ಗಮನವನ್ನು ಸೆಳೆದಿದ್ದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್‌ ಮಾಡಿ ಅಭಿನಂದಿಸಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆಯ ಜ್ಯೋತಿ ಪೂಜಾರಿ ಮುಂಬೈನಲ್ಲಿ ವಾಸವಿದ್ದು ಊರಿಗೆ ಬಂದಿದ್ದರು. ಅವರು ಮನೆಯಂಗಳದಲ್ಲಿ ಆಡುವಾಗ ಹೊಡೆದಿರುವ ಈ ಕವರ್‌ ಡ್ರೈವ್‌ ವಿಡಿಯೋವನ್ನು ರಂಜಿತ್‌ ಪೂಜಾರಿ ಎಂಬವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ಈ ವಿಡಿಯೋವನ್ನು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಕೂಡಾ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ್ದು “ಸ್ಟೆಪ್ಪಿಂಗ್‌ ಔಟ್‌ ಟು ದ ಲೆಗ್‌ಸೈಡ್‌ ಆಂಡ್‌ ಸ್ಮಾಶಿಂಗ್‌ ಇಟ್‌ ಥ್ರೂ ದ ಕವರ್ಸ್ ಎಂದು ಬರೆದಿದ್ದು ಹಾಗೆಯೇ ಇಂತಹ ಹೊಡೆತವನ್ನು ಎಲ್ಲದರೂ ನೋಡಿದ್ದೀರಾ? ಎಂದು ಪ್ರಶ್ನಿಸಿದೆ.

ಯುವತಿಯ ವೃತ್ತಿಪರರ ಆಟದಂತಿರುವ ಹೊಡೆತವನ್ನು ಮೆಚ್ಚಿರುವ ಕ್ರಿಕೆಟ್‌ ಪ್ರಿಯರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ಮೆಚ್ಚಿದ್ದಾರೆ.

Comments are closed.