ಮಂಗಳೂರು, ಜೂನ್.11 : ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ಬಿ. ವೇಣು ಗೋಪಾಲ್ ಐತಾಳ್ (49) ಅವರು ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಜೂ. 11ರಂದು ನಿಧನರಾಗಿದ್ದಾರೆ.
ಶ್ರೀಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಪೂಜಾ ಮನೆತನಕ್ಕೆ ಸೇರಿದ ಇವರು, ಈ ವರ್ಷದ ಪ್ರಧಾನ ಅರ್ಚಕರಾಗಿ ನಿಯುಕ್ತಿಗೊಂಡಿದ್ದರು. ದೇವಸ್ಥಾನದ ಪೂಜಾ ಕೆಲಸದೊಂದಿಗೆ ಊರಿನ ಪೌರೋಹಿತ್ಯವನ್ನು ನಿರ್ವಹಿಸುತ್ತಿದ್ದರು.
ಉತ್ತಮ ಕ್ರಿಕೆಟ್ ಆಟಗಾರನಾಗಿದ್ದು, ಸ್ಥಳೀಯ ತಂಡದಲ್ಲಿ ಹಾಗೂ ಬ್ರಾಹ್ಮಣ ಯುವಕರ ತಂಡದಲ್ಲಿ ಸಕ್ರೀಯವಾಗಿದ್ದರು. ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಾಮಾಜಿಕ ಚಟುವಟಿಕೆಯಲ್ಲಿದ್ದರು.
ತಾಯಿ ಜಲಜಾಕ್ಷಿ, ಸಹೋದರ ವೇದಮೂರ್ತಿ ಚಂದ್ರಶೇಖರ್ ಐತಾಳ್, ಹರೀಶ್ ಐತಾಳ್, ಸಹೋದರಿ ಲಕ್ಷ್ಮೀ ಹೊಳ್ಳ ಇದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ನಡೆಯಲಿದೆ.
Comments are closed.