ಮಂಗಳೂರು ಜೂನ್.10 : ಹೊಸದಾಗಿ ಆರಂಭವಾದ ಪೌರರಕ್ಷಣಾ ಪಡೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮುಖ್ಯಪಾಲಕರಾಗಿ (ಚೀಫ್ ವಾರ್ಡನ್) ಆಗಿ ಗೃಹರಕ್ಷಕದಳ ಜಿಲ್ಲಾ ಸಮಾದೇಷ್ಟ ಡಾ. ಮುರಲೀಮೋಹನ ಚೂಂತಾರು ಅವರನ್ನು ನೇಮಕ ಮಾಡಲಾಗಿದೆ.
ದ.ಕ. ಜಿಲ್ಲೆಯಲ್ಲಿ ಪೌರರಕ್ಷಣಾ ತಂಡವನ್ನು ರಚಿಸಿ, ತರಬೇತಿ ನೀಡಿ ಸಾರ್ವಜನಿಕ ಆಸ್ತಿಪಾಸ್ತಿ ಮತ್ತು ಜನರ ರಕ್ಷಣೆಗೆ ಪೂರಕವಾದ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಹೊಣೆಗಾರಿಕೆಯನ್ನು ಪೌರರಕ್ಷಣಾ ದಳದ ಮುಖ್ಯ ಪಾಲಕರಿಗೆ ನೀಡಲಾಗಿದೆ. ಇವರ ಅವಧಿ 3 ವರ್ಷ ಆಗಿರುತ್ತದೆ.
Comments are closed.