ಕರಾವಳಿ

ಬೀದಿಬದಿ ವ್ಯಾಪರಸ್ಥರನ್ನು ತೆರವುಗೊಳಿಸದಂತೆ ಎಸ್‌ಡಿಪಿಐ ಕಾರ್ಪೊರೇಟರ್‌ಗಳಿಂದ ಮನವಿ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಬೀದಿಬದಿ ವ್ಯಾಪರಸ್ಥರನ್ನು ತೆರವುಗೊಳಿಸಲು ಮುಂದಾಗಿರುವುದಕ್ಕೆ ಎಸ್ ಡಿಪಿಐ ಕಾರ್ಪೊರೇಟರ್ ತೀವ್ರ ವಿರೋಧ. ವ್ಯಕ್ತಪಡಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ತಮ್ಮ ಕುಟುಂಬದ ಜೀವನಾಧಾರಕ್ಕಾಗಿ ಬೀದಿ ಬದಿಯಲ್ಲಿ ಚಿಕ್ಕ ಪುಟ್ಟ ವ್ಯಾಪಾರವನ್ನು ಮಾಡುತ್ತಿರುವವರನ್ನು ಪಾಲಿಕೆಯು ಜೂನ್ 5 ರಿಂದ ಟೈಗರ್ ಕಾರ್ಯಾಚರಣೆಯ ಮೂಲಕ ತೆರವುಗೊಳಿಸುವ ಕ್ರಮದ ವಿರುದ್ಧ ವಿರೋಧ ವ್ಯಕ್ತಪಡಿಸಿರುವ ಎಸ್‌ ಡಿಪಿಐಯ ಎರಡು ಕಾರ್ಪೊರೇಟರ್ ಗಳಾದ ಮುನೀಬ್ ಬೆಂಗ್ರೆ ಮತ್ತು ಸಂಶಾದ್ ಅಬೂಬಕ್ಕರ್ ರವರು ಈ ಬಗ್ಗೆ ಪಾಲಿಕೆ ಆಯುಕ್ತರಿಗೆ ಮತ್ತು ಮೇಯರ್ ರವರಿಗೆ ಮನವಿ ಸಲ್ಲಿಸಿದ್ದಾರೆ.

ಕೋವಿಡ್ 19 ಲಾಕ್ ಡೌನ್ ನಿಂದ ಬೀದಿಬದಿ ವ್ಯಾಪಾರಸ್ಥರು ಸಂಕಷ್ಟದಲ್ಲಿರುವಾಗ ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ಏಕಾಏಕಿ ತೆರವುಗೊಳಿಸುವ ಪ್ರಕ್ರಿಯೆ ಅಕ್ಷ್ಯಮ್ಯವಾಗಿದ್ದು ಇದನ್ನು ನಾವು ಖಂಡಿಸುತ್ತೇವೆ ಮತ್ತು ವಿರೋಧಿಸುತ್ತೇವೆ ಎಂದು ತಿಳಿಸಿರುವ ಅವರು, ಈ ಬಗ್ಗೆ ಆಯುಕ್ತರು ಪರಿಶೀಲನೆ ಮಾಡಿ ಯಾವುದೇ ಕಾರಣಕ್ಕೂ ಬೀದಿಬದಿ ವ್ಯಾಪಾರಸ್ಥರಿಗೆ ತೋಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

 

 

Comments are closed.