ಕರಾವಳಿ

ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆಗೆ ದಿಢೀರ್ ವೀರ ಸಾವರ್ಕರ್ ಹೆಸರು ನಾಮಕರಣ!! ತೀವ್ರ ಚರ್ಚೆ

Pinterest LinkedIn Tumblr

ಮಂಗಳೂರು, ಜೂನ್ 02 : ಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ ಗೆ ವೀರ ಸಾವರ್ಕರ್ ಎಂದು ನಾಮಕರಣ ಮಾಡಲಾಗಿದೆ ಎಂಬ ಬಗ್ಗೆ ವ್ಯಾಪಕ ಮಾಹಿತಿ ಹರಡಿದ್ದು, ಇದೀಗ ಈ ವಿಷಯ ಸಾಮಾಜಿಕ ಜಲತಾಣದಲ್ಲಿ ವೈರಲ್ ಆಗಿದೆ.

ಮಾತ್ರವಲ್ಲದೇ ಏಕಾಏಕಿ ಪಂಪ್ ವೆಲ್ ಮೇಲ್ಸೇತುವೆಯಲ್ಲಿ ವೀರ ಸಾವರ್ಕರ್ ಹೆಸರು ಕಾಣಿಸಿಕೊಂಡಿರುವುದ ಹಾಗೂ ವೀರ ಸಾವರ್ಕರ್ ಮೇಲ್ಸೇತುವೆ ಪಂಪ್ ವೆಲ್ ಎಂಬ ನಾಮಾಂಕಿತ ಬ್ಯಾನರ್ ಅಳವಡಿಸಲಾಗಿದ್ದು ಅಚ್ಚರಿಗೆ ಕಾರಣವಾಗಿದೆ.

ಮಂಗಳವಾರ ರಾತ್ರಿ ಫ್ಲೈ ಓವರ್ ಮೇಲೆ ವೀರ ಸಾವರ್ಕರ್ ಹೆಸರು ಹಾಕಿರುವ ಫ್ಲೆಕ್ಸ್ ಹಾಕಲಾಗಿದೆ.. ಪಂಪ್ ವೆಲ್ ಸೇತುವೆಗೆ ಸಡನ್ ಆಗಿ ಬ್ಯಾನರ್ ಮೂಲಕ ಯಾರೋ ವೀರ ಸಾವರ್ಕರ್ ಹೆಸರನ್ನಿರುವ ಬ್ಯಾನರ್ ಅಂಟಿಸಿ ಪಕ್ಕದಲ್ಲೇ ಬಜರಂಗದಳ ಎಂದು ಬರೆದಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಮೇಲ್ಸೇತುವೆಗೆ ಹೆಸರು ಇಡುವ ಬಗ್ಗೆ ಚರ್ಚೆ ಆಗುತ್ತಿದ್ದು ,ಇತ್ತ ಮಂಗಳೂರಿನಲ್ಲಿ ಸಾವರ್ಕರ್ ಹೆಸರು ಇಟ್ಟೇ ಬಿಟ್ಟಿದ್ದಾರೆ.ಇದರ ಹಿಂದೆ ಯಾರಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಏಕಾಏಕಿ ಪಂಪ್ ವೆಲ್ ಮೇಲ್ಸೇತುವೆಯಲ್ಲಿ ವೀರ ಸಾವರ್ಕರ್ ಹೆಸರು ಕಾಣಿಸಿಕೊಂಡಿದೆ. ವೀರ ಸಾವರ್ಕರ್ ಮೇಲ್ಸೇತುವೆ ಪಂಪ್ ವೆಲ್ ಎಂಬ ನಾಮಾಂಕಿತ ಬ್ಯಾನರ್ ಅಳವಡಿಸಲಾಗಿದ್ದು ಅಚ್ಚರಿಗೆ ಕಾರಣವಾಗಿದೆ.

ಪಂಪ್ ವೆಲ್ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿನ ಬ್ಯಾನರ್ ಗಮನಿಸಿದ ಬಳಿಕ ಇದೀಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಕೈ ಪಾಳಯದಲ್ಲಿ ಅಚ್ಚರಿ ಮೂಡಿಸಿದೆ. ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿನ ಬ್ಯಾನರ್ ಅಳವಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಎಲ್ಲರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಇದೇ ವೇಳೆ ಮಂಗಳವಾರ ರಾತ್ರಿ 8 ಗಂಟೆಗೆ ಪಂಪ್ ವೆಲ್ ಮೇಲ್ಸೇತುವೆಯಲ್ಲಿ ವೀರ ಸಾವರ್ಕರ್ ಹೆಸರಿರುವ ಬ್ಯಾನರ್ ಪತ್ತೆಯಾಗಿತ್ತು. ಆದರೆ, ರಾತ್ರಿ 9 ಗಂಟೆಗೆ ಬ್ಯಾನರ್ ಮಾಯವಾಗಿದೆ. ಫ್ಲೆಕ್ಸ್ ಏಕಾಏಕಿ ಮಾಯವಾಗಿ ರುವ ಬಗ್ಗೆ ಕೂಡ ಶಂಕೆ ವ್ಯಕ್ತವಾಗಿದೆ.

Comments are closed.