ಕರಾವಳಿ

ಪಣಂಬೂರು ಬಳಿ ಭೀಕರ ಅಪಘಾತ : ಬೈಕ್ ಸವಾರರಿಬ್ಬರು ಗಂಭೀರ

Pinterest LinkedIn Tumblr

ಪಣಂಬೂರು, ಮೇ 29: ಕೂಳೂರು ಹಾಗೂ ಪಣಂಬೂರು ಮಧ್ಯೆ ಇರುವ ಕುದುರೆಮುಖ ಅದಿರು ಕಾರ್ಖಾನೆ ಬಳಿ ಇಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕರಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಪಲ್ಸರ್ ಎನ್ ಎಸ್ ಬೈಕ್ ನಲ್ಲಿ ಮೂವರು ಯುವಕರು ಪ್ರಯಾಣಿಸುತ್ತಿದ್ದು, ಈ ಸಂದರ್ಭ ಪಣಂಬೂರ್ ಸಮೀಪದ ಕುದುರೆಮುಖ ಬಳಿ ಟಿಪ್ಪರೊಂದು ಬೈಕಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಸಂದರ್ಭ ಇಬ್ಬರು ಯುವಕರು ಟಿಪ್ಪರನ ಟಯರ್ ಅಡಿಯಲ್ಲಿ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,, ಇವರಿಬ್ಬರ ಸ್ಥಿತಿ ಚಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಅಪಘಾತಕ್ಕೆ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆ ಕಾರಣ ಎಂದು ಹೇಳಲಾಗಿದೆ. ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಠಾಣೆಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Comments are closed.