ಮಂಗಳೂರು: ಮೇ. 28 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮತ್ತೆ 6 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ದ.ಕ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 86ಕ್ಕೆ ಏರಿಕೆಯಾಗಿದೆ.
ಸೋಂಕಿಗೆ ಒಳಗಾದ ಬಹುತೇಕ ಮಂದಿ ಮಹಾರಾಷ್ಟ್ರದ ಮುಂಬೈನಿಂದಲ್ಲೇ ಬಂದವರಾಗಿದ್ದಾರೆ. ಅಂತಾರಾಜ್ಯ ಪ್ರಯಾಣಕ್ಕೆ ಅನುಮತಿ ದೊರೆತ ಬಳಿಕ ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಏರುತ್ತಿದೆ.
ಇಂದು ಕೊರೊನಾ ಪತ್ತೆಯದವರಲ್ಲಿ 61, 18 ವರ್ಷದ ಮಹಿಳೆ, 62 , 50 , 24, 36 ವರ್ಷದ ಪುರುಷರು ಸೇರಿದ್ದಾರೆ. ಇವರೆಲ್ಲರೂ ಮಹಾರಾಷ್ಟ್ರ ರಾಜ್ಯ ಮುಂಬೈನಿಂದ ಹಿಂತಿರುಗಿ ಬಂದು ಕ್ವಾರಂಟೈನ್ ನಲ್ಲಿದ್ದವರಾಗಿದ್ದಾರೆ.
ಪ್ರಮುಖ ಅಂಶಗಳು :
ದ.ಕ ಜಿಲ್ಲೆಯಲ್ಲಿ ಇಂದು ಮತ್ತೆ ಮಹಾರಾಷ್ಟ್ರ ಕೊರೋನಾ ದಾಳಿ
ಮಹಾರಾಷ್ಟ್ರದಿಂದ ಬಂದ ದ.ಕ ಜಿಲ್ಲೆಯ ಆರು ಜನರಿಗೆ ಕೊರೋನಾ ಪಾಸಿಟಿವ್ ಪತ್ತೆ
4 ಗಂಡಸರು ಮತ್ತು 2 ಹೆಂಗಸರಲ್ಲಿ ಕಾಣಿಸಿಕೊಂಡ ಕೊರೋನಾ ಸೋಂಕು
ಮಹಾರಾಷ್ಟ್ರದಿಂದ ಬಂದ 61ವರ್ಷ ಮತ್ತು 62 ವರ್ಷದ ವೃದ್ದೆಯರಿಗೆ ಸೋಂಕು
50, 25 ಮತ್ತು 36 ವರ್ಷದ ಗಂಡಸರಿಗೆ ಸೋಂಕು
ಓರ್ವ 18 ವರ್ಷದ ಯುವತಿಗೂ ಸೋಂಕು
ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ಆಗಿದ್ದ ಆರು ಜನರು.
Comments are closed.