ಕರಾವಳಿ

ದ.ಕ.ಜಿಲ್ಲೆಯಲ್ಲಿ ಇಂದು 1ಪಾಸಿಟಿವ್ ಪ್ರಕರಣ ಪತ್ತೆ : ಪೊಲೀಸ್ ಕಾನ್ ಸ್ಟೇಬಲ್‌ಗೆ ಕೊರೋನಾ ದೃಢ

Pinterest LinkedIn Tumblr

ಮಂಗಳೂರು, ಮೇ 24 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ವಿಟ್ಲ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಗೆ ಕೊರೋನಾ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಈ ಮೂಲಕ ದಕ್ಷಿಣ ಕನ್ನಡದಲ್ಲಿ ಸೋಂಕು ಪೀಡಿತರ ಸಂಖ್ಯೆ 65ಕ್ಕೇರಿದೆ.

ಮುಂಬೈನಿಂದ ಬಂದ ವ್ಯಕ್ತಿಯ ಸಂಪರ್ಕದಿಂದಾಗಿ ವಿಟ್ಲ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಗೆ ಕೊರೊನಾ ದೃಢಪಟ್ಟಿದೆ.

ಮೇ 14 ರಂದು ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಆತ ಕ್ವಾರಂಟೈನ್‌ಗೆ ಒಳಗಾಗುವ ಮುನ್ನ ಪೊಲೀಸ್ ಠಾಣೆಗೆ ಹೋಗಿದ್ದ ಎಂದು ತಿಳಿದು ಬಂದಿದೆ.

ಪೊಲೀಸರ ಕೊರೊನಾ ಪರೀಕ್ಷೆ ನಡೆಸಿದ ವೇಳೆ ಹೆಡ್ ಕಾನ್ ಸ್ಟೇಬಲ್ ಗೆ ಕೊರೊನಾ ಇರುವುದು ದೃಢಪಟ್ಟಿದೆ.

ಪ್ರಮುಖ ಅಂಶಗಳು :

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪೊಲೀಸ್ ಕಾನ್ ಸ್ಟೇಬಲ್ ಗೆ ಕೊರೋನಾ ಪಾಸಿಟಿವ್

ಮುಂಬೈನಿಂದ ಬಂದ ವ್ಯಕ್ತಿಯಿಂದ ಪೊಲೀಸ್ ಗೆ ಕೊರೋನಾ ಪಾಸಿಟಿವ್

ವಿಟ್ಲ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಗೆ ಕೊರೋನಾ ಪಾಸಿಟಿವ್

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ

ಮೇ.14ರಂದು ಮಹರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಆಗಿತ್ತು

ನಾಲ್ಕು ದಿನ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ ಮೇ.18 ರಂದು ಪಾಸಿಟಿವ್

ಮೇ.18 ರಿಂದ ವಿಟ್ಲ ಠಾಣೆಯ ಮೂವರು ಪೊಲೀಸರು ಕ್ವಾರಂಟೈನ್

ಅದರಲ್ಲಿ ಓರ್ವ ಪೊಲೀಸ್ ಗೆ ಇಂದು ಕೊರೋನಾ ಪಾಸಿಟಿವ್

ಕ್ವಾರಂಟೈನ್ ಗೆ ಹೋಗುವ ಮುನ್ನ ಪೊಲೀಸ್ ಠಾಣೆಗೆ ಹೋಗಿದ್ದ ಸೋಂಕಿತ

ಕ್ವಾರಂಟೈನ್ ಬಗ್ಗೆ ಸರಿಯಾದ ಮಾಹಿತಿ ನೀಡದಿರೋದ್ರಿಂದ ಠಾಣೆಗೆ ಹೋಗಿದ್ದ ವ್ಯಕ್ತಿ

ಆತನ ಸಂಪರ್ಕದಿಂದ ಇಂದು ಓರ್ವ ಪೊಲೀಸ್ ಗೆ ಪಾಸಿಟಿವ್.

Comments are closed.