ಕರಾವಳಿ

ದ.ಕ.ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್‌ ಪತ್ತೆ : ಸೋಂಕು ಪೀಡಿತರ ಸಂಖ್ಯೆ 48ಕ್ಕೇರಿಕೆ

Pinterest LinkedIn Tumblr

ಮಂಗಳೂರು, ಮೇ 20 : ದ.ಕ.ಜಿಲ್ಲೆಯಲ್ಲಿ ಇಂದು ಮತ್ತೊಂದು ಕೊರೊನಾ ಪಾಸಿಟಿವ್‌ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ದೃಢಪಟ್ಟವರ ಸಂಖ್ಯೆ 48ಕ್ಕೇರಿಕೆದೆ.

ಮಂಗಳೂರಿನ ನೀರುಮಾರ್ಗದ ಕುಟ್ಟಿಕಾಲ ನಿವಾಸಿ 40 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಈ ಮಹಿಳೆ ನೀರುಮಾರ್ಗದ ಕುಟ್ಟಿಕಾಲ ಹಾಗೂ ಕುಡುಪುವಿನ ಮನೆಯಲ್ಲಿ ಇದ್ದ ಬಗ್ಗೆ ಮಾಹಿತಿ ದೊರೆತಿದೆ.

ಮಹಿಳೆಯು ಮೇ.10 ರಂದು ತನ್ನ ಮಗನೊಂದಿಗೆ ಬೆಂಗಳೂರಿನ ರಾಜಾಜಿನಗರದಿಂದ ಮಂಗಳೂರಿಗೆ ಕಾರಿನಲ್ಲಿ ಬಂದಿದ್ದು ಅಸ್ತಮ ಮತ್ತು ಬಿಪಿಯಿಂದಾಗಿ ಮೇ.17 ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು.

ಇದೀಗ ಈ ಮಹಿಳೆ ಒಂದು ವಾರಗಳ ಕಾಲ ಇದ್ದ ಪ್ರದೇಶವೆಲ್ಲವನ್ನೂ ಸೀಲ್‌ಡೌನ್‌ ಮಾಡುವ ಸಾಧ್ಯತೆಯಿದೆ. ದ.ಕ. ಜಿಲ್ಲೆಯಲ್ಲಿ ಈವರೆಗೆ 48 ಜನರಿಗೆ ಕೊರೊನಾ ಸೋಂಕು ತಗುಲಿದ್ದು ಒಟ್ಟು 11 ಮಂದಿ ಗುಣಮುಖರಾಗಿ ದ್ದಾರೆ. 5 ಮಂದಿ ಮಹಿಳೆಯರು ಕೊರೊನಾಗೆ ಬಲಿಯಾಗಿದ್ದಾರೆ.

ಮುಖ್ಯಂಶಗಳು:

ಮಂಗಳೂರಿನ 40 ವರ್ಷದ ಮಹಿಳೆಗೆ ಕೊರೋನಾ ಸೋಂಕು

ಮಂಗಳೂರಿನ ನೀರುಮಾರ್ಗದ ಕುಟ್ಟಿಕಾಲ ನಿವಾಸಿ

ನೀರುಮಾರ್ಗದ ಕುಟ್ಟಿಕಾಲ ಹಾಗೂ ಕುಡುಪು ಮನೆಯಲ್ಲಿ ಇದ್ದ ಬಗ್ಗೆ ಮಾಹಿತಿ

ಬೆಂಗಳೂರಿನ ರಾಜಾಜಿನಗರದಿಂದ ಬಂದ ಮಹಿಳೆ

ಮೇ.10 ರಂದು ಕಾರಿನಲ್ಲಿ ತಾಯಿ ಮಗ ಬಂದಿದ್ದರು

ಅಸ್ತಮ ಮತ್ತು ಬಿಪಿಯಿಂದಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲು

ಮೇ.17 ರಂದು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲು

ಒಂದು ವಾರ ಎಲ್ಲಿ ಇದ್ದರು ಅಲ್ಲಿ ಸೀಲ್ ಡೌನ್ ಮಾಡುವ ಸಾಧ್ಯತೆ

ಬೆಂಗಳೂರಿನಲ್ಲಿ ಕೋರಿಯರ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ

ಬೆಂಗಳೂರಿನ ರಾಜಾಜಿನಗರದಲ್ಲಿ ಹಲವರ ಸಂಪರ್ಕ ಸಾಧ್ಯತೆ

ಕರಾವಳಿ ಮತ್ತು ಬೆಂಗಳೂರಿನ ರಾಜಾಜಿನಗರದಲ್ಲಿ ಆತಂಕ.

Comments are closed.