ಕರಾವಳಿ

ವಿದೇಶದಿಂದ 3ನೇ ವಿಮಾನ ಇಂದು ಸಂಜೆ ಮಂಗಳೂರಿಗೆ.. : ಮಸ್ಕತ್‌ನಿಂದ ಬರಲಿದ್ದಾರೆ ಕರಾವಳಿಯ 63ಮಂದಿ ಕನ್ನಡಿಗರು

Pinterest LinkedIn Tumblr

ಮಂಗಳೂರು, ಮೇ 20 : ಲಾಕ್ ಡೌನ್ ಬಳಿಕ ವಿದೇಶದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂರನೇ ವಿಮಾನ ಇಂದು ಸಂಜೆ ಆಗಮಿಸಲಿದೆ. ಇದು ವಿದೇಶದಿಂದ ಮೂರನೇ ವಿಮಾನ ಆದರೆ ಮಸ್ಕತ್ ನಿಂದ ಮಂಗಳೂರಿಗೆ ಆಗಮಿಸುವ ಮೊದಲ ವಿಮಾನವಾಗಿದೆ.

ಮಸ್ಕತ್ ನಿಂದ ಕರಾವಳಿಯ 63ಮಂದಿ ಕನ್ನಡಿಗರು ಸಹಿತಾ 176 ಮಂದಿ ಪ್ರಯಾಣಿಕರನ್ನು ಹೊತ್ತು ತರಲಿರುವ ಈ ವಿಮಾನ ಮಸ್ಕತ್ ನಿಂದ ನೇರವಾಗಿ ಬೆಂಗಳೂರಿಗೆ ಬರಲಿದೆ. ಬಳಿಕ ರಾತ್ರಿ 8.10ರ ಸುಮಾರಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.

ಮಸ್ಕತ್ ನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ IX817 ಮೂಲಕ ಒಟ್ಟು 176 ಮಂದಿ ಪ್ರಯಾಣಿಕರು ಹೊರಡಲಿದ್ದು, ಈ ಪೈಕಿ ಇಬ್ಬರು ಶಿಶುಗಳು ಸೇರಿದಂತೆ 113 ಮಂದಿ ಪ್ರಯಾಣಿಕರು ಬೆಂಗಳೂರಿನಲ್ಲಿ ಲ್ಯಾಂಡ್ ಆಗಲಿದ್ದಾರೆ. ಉಳಿದ 63 ಪ್ರಯಾಣಿಕರನ್ನೊಳಗೊಂಡು ವಿಮಾನ ಮಂಗಳೂರಿಗೆ ಆಗಮಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಮುಖ ಅಂಶಗಳು :

ವಿದೇಶದಿಂದ ಇಂದು ಮಂಗಳೂರಿಗೆ ಮೂರನೇ ವಿಮಾನ ‌ಆಗಮನ

ಮಸ್ಕತ್ ನಿಂದ ಮಂಗಳೂರಿಗೆ ಆಗಮಿಸಲಿರುವ 63 ಕರಾವಳಿಗರು

ಮಸ್ಕತ್ ನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ IX817 ಮೂಲಕ ಬೆಂಗಳೂರಿಗೆ

ಮಸ್ಕತ್ ನಿಂದ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿ ಬಳಿಕ ಬೇರೊಂದು ವಿಮಾನದಲ್ಲಿ ಮಂಗಳೂರಿನಲ್ಲಿ ಲ್ಯಾಂಡ್

ಏರ್ ಇಂಡಿಯಾ ಎಕ್ಸ್ ಪ್ರೆಸ್ IX818 ವಿಮಾನದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮನ

ರಾತ್ರಿ 8.10ರ ಸುಮಾರಿಗೆ ಮಂಗಳೂರು ಏರ್ ಪೋರ್ಟ್ ‌ಗೆ ಆಗಮನ

ಕರಾವಳಿಯ 63 ಪ್ರಯಾಣಿಕರನ್ನು ಹೊತ್ತೊಯ್ದು ಆಗಮಿಸುವ ವಿಮಾನ

ಒಟ್ಟು 178 ಪ್ರಯಾಣಿಕರ ಪೈಕಿ 115 ಮಂದಿ ಬೆಂಗಳೂರಿಗರು.

Comments are closed.