ಕರಾವಳಿ

ಕೇರಳದಲ್ಲಿ ಸಿಲುಕಿದ ಉಡುಪಿ ಜಿಲ್ಲೆಯ 41 ಬೋಟುಗಳ ಮೀನುಗಾರರ ರಕ್ಷಣೆಗೆ ನೆರವಾದ ಸಚಿವ ಕೋಟ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ 41 ಬೋಟುಗಳು ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಚರವತ್ತೂರು, ಚೊಂಬಲ್ ಮತ್ತು ಕಣ್ಣೂರುನಲ್ಲಿ ಸಿಲುಕಿದ ಮೀನುಗಾರರ ರಕ್ಷಣೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಂದಾಗಿದ್ದಾರೆ.

ಅತ‌ಂತ್ರರಾದ ಮೀನುಗಾರರು ಸಚಿವರ ಮೊರೆ ಹೋದ ಹಿನ್ನೆಲೆಯಲ್ಲಿ,ಸಚಿವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ರವರೊಂದಿಗೆ ಚರ್ಚಿಸಿ ಕೇರಳ ಸರ್ಕಾರದ ಜೊತೆ ಸಂಪರ್ಕ ಬೆಳೆಸಿ, ಇದೀಗ ಎರಡು ರಾಜ್ಯಗಳ ಒಪ್ಪಂದದಂತೆ ಇಂದು ಅಪರಾಹ್ನ 1.00 ಗಂಟೆಗೆ ಬೋಟುಗಳ ಮಾಲೀಕ ಮೀನುಗಾರರು ಬೋಟ್‌ನ್ನು ಮರಳಿ ತರಲು ಇನ್ನಿತರ ಮೀನುಗಾರರ ಜೊತೆಗೆ, ಮೂರು ವಿಶೇಷ ಯಾಂತ್ರೀಕೃತ ಬೋಟುಗಳ ಮೂಲಕ ತೆರಳುತ್ತಿದ್ದಾರೆ.

ಈ ಬಗ್ಗೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಪ್ರಯಾಣ ವೆಚ್ಚ ಭರಿಸಲು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಇದರಿಂದ ಸಂಕಷ್ಟದಲ್ಲಿ ಸಿಲುಕಿರುವ 41 ಯಾಂತ್ರೀಕೃತ ಬೋಟುಗಳ ಮೀನುಗಾರರಿಗೆ ಸಹಕಾರ ವಾಗಲಿದೆ.

Comments are closed.