ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾಗೆ 5ನೇ ಬಲಿ : ಮೃತಪಟ್ಟವರೆಲ್ಲರು ಮಹಿಳೆಯರು

Pinterest LinkedIn Tumblr

ಮಂಗಳೂರು, ಮೇ 14 : ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೋನಾ 5ನೇ ಬಲಿ ಪಡೆದಿದೆ. ಅನ್ಯರೋಗದ ಜೊತೆಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಲಶೇಖರದ 80ರ ವೃದ್ಧೆ ಗುರುವಾರ ಮೃತಪಟ್ಟಿದ್ದಾರೆ. ರೋಗಿ ಸಂಖ್ಯೆ P-507 ಕೊರೋನಾಗೆ ಬಲಿಯಾದ ವೃದ್ಧೆ

ಕೊರೋನಾ ಸೋಂಕಿನಿಂದ ಕೋವಿಡ್‌ ಆಸ್ಪತ್ರೆಯಲ್ಲಿದ್ದ ಮೃತಪಟ್ಟ ಕುಲಶೇಖರದ ಈ ವೃದ್ಧೆಯು ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದು, ಆರೋಗ್ಯ ಸ್ಥಿತಿ ಕೂಡ ಗಂಭೀರವಾಗಿತ್ತು. ಅವರಿಗೆ ಹಲವು ದಿನಗಳಿಂದ ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದ್ದು. ಆದರೆ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ವಿಶೇಷವೆಂದರೆ ದ.ಕ. ಜಿಲ್ಲೆಯಲ್ಲಿ ಮೃತಪಟ್ಟವರೆಲ್ಲರು ಮಂಗಳೂರಿನ ಪಡೀಲ್ ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯ ನಂಟು ಹೊಂದಿದ್ದರು. ಮತ್ತೊಂದು ವಿಶೇಷವೆಂದರೆ ಜಿಲ್ಲೆಯಲ್ಲಿ ಮೃತಪಟ್ಟವರೆಲ್ಲ ಮಹಿಳೆಯರೇ ಆಗಿದ್ದು, ಇವರೆಲ್ಲರಿಗೂ ಫಸ್ಟ್ ನ್ಯೂರೋ ಆಸ್ಪತ್ರೆ ಕಂಟಕವಾಗಿ ಪರಿಣಮಿಸಿದೆ.

ನಿನ್ನೆಯಷ್ಟೇ (ಬುಧವಾರ) ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಬೋಳೂರಿನ 58ರ ಮಹಿಳೆ ಸಾವಿಗೀಡಾಗಿದ್ದು, ಇಂದು ಮತ್ತೊಂದು ಸಾವು ಸಂಭವಿಸಿದ್ದು, ದ.ಕ. ಜಿಲ್ಲೆಗೆ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆ ಕರಾಳವಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ ಕೊರೋನಾ ಪ್ರಕರಣ 34ಕ್ಕೆ ಏರಿಕೆಯಾಗಿದ್ದು, ಫಸ್ಟ್‌ ನ್ಯೂರೋ ಆಸ್ಪತ್ರೆ ಸಂಪರ್ಕದಿಂದ ಸೋಂಕಿತರಾದವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

Comments are closed.