ಮಂಗಳೂರು, ಮೇ 13: ದಕ್ಷಿಣ ಕನ್ನಡದಲ್ಲಿ ಮಹಾಮಾರಿ ಕೊರೋನಾಗೆ 4ನೇ ಬಲಿಯಾಗಿದೆ. ಅನ್ಯಕಾಯಿಲೆಯಿಂದ ಬಳಲುತ್ತಿದ್ದ ಕೊರೋನಾ ಪೀಡಿತೆ ಮಂಗಳೂರಿನ ಬೋಳೂರು ನಿವಾಸಿ,58 ವರ್ಷದ ಮಹಿಳೆ ಇಂದು ತೀವ್ರ ಅಸೌಖ್ಯದಿಂದ ಮೃತಪಟ್ಟಿದ್ದಾರೆ.
ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೆದುಳು ಸಂಬಂದಿತ ಕಾಯಿಲೆಯಿಂದ ಬಳಲುತ್ತಿದ್ದ 58 ವರ್ಷದ ಮಹಿಳೆಗೆ ಸೋಂಕು ತಗಲಿತ್ತು. ನಂತರ ಗಂಟಲಿನ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು ಅದರ ವರದಿ ಏಪ್ರಿಲ್ 30ರಂದು ಬಂದಿದ್ದು ಅದರಲ್ಲಿ ಕೋವಿಡ್ ದೃಢಪಟ್ಟಿತ್ತು ನಂತರ ಅವರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು
ಕೋವಿಡ್ ನಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೋಳೂರಿನ ವೃದ್ಧೆಯ ಸ್ಥಿತಿ ನಿನ್ನೆಯಿಂದ ಗಂಭೀರವಾಗಿ ಇತ್ತು. ಅವರು ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಮುಖ್ಯಂಶಗಳು :
ದಕ್ಷಿಣ ಕನ್ನಡದಲ್ಲಿ ಮಹಾಮಾರಿ ಕೊರೋನಾಗೆ 4 ನೇ ಬಲಿ
ಮಂಗಳೂರಿನ ಬೋಳೂರು ನಿವಾಸಿ,58 ವರ್ಷದ ಮಹಿಳೆ ಕೊರೋನಾಗೆ ಬಲಿ
ಮೆದುಳು ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆ
ಎಪ್ರಿಲ್ 30 ರಂದು ಮಹಿಳೆಗೆ ಧೃಡಪಟ್ಟಿದ್ದ ಕೊರೋನಾ ಪಾಸಿಟಿವ್
ಫಸ್ಟ್ ನ್ಯೂರೋ ಆಸ್ಪತ್ರೆಯ ಸ್ವೀಪರ್ ನ ಸಂಪರ್ಕದಿಂದ ಸೋಂಕು ಹರಡಿತ್ತು
ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೆದುಳಿನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಮೃತ ಮಹಿಳೆ
ಸದ್ಯ ಮಂಗಳೂರಿನ ಕೋವಿಡ್ ಆಸ್ಪತ್ರೆಯ ICUನಲ್ಲಿದ್ದ ಮೃತ ಮಹಿಳೆ
ಈ ಹಿಂದೆ ಬಂಟ್ವಾಳದ ಮೂವರು ಸೋಂಕಿತರು ಬಲಿಯಾಗಿದ್ದರು

Comments are closed.