ಕರಾವಳಿ

ನಾಳೆ ಉಡುಪಿ ಜಿಲ್ಲೆಯಲ್ಲಿ ಎಷ್ಟು ಬಸ್ಸು ಎಲ್ಲೆಲ್ಲಿಗೆ ಹೋಗುತ್ತೆ?- ಬಸ್ಸಿನವರು, ಪ್ರಯಾಣಿಕರಿಗೆ ಷರತ್ತೇನು?

Pinterest LinkedIn Tumblr

ಉಡುಪಿ: ರಾಜ್ಯದಲ್ಲಿ ಕೋರೊನಾ ವೈರಸ್ ಹರಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರದಿಂದ ನಿರ್ದೇಶನ ಮತ್ತು ಆದೇಶ ನೀಡಿರುವುದಾಗಿದೆ. ಈ ಸಂಬAಧ ಜಿಲ್ಲೆಯಲ್ಲಿ ಕೋರೊನಾ ವೈರಸ್ ಹರಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಈ ಜಿಲ್ಲೆಯಾದ್ಯಂತ ಹಲವು ನಿರ್ಭಂದ ಹಾಗೂ ವಿನಾಯಿತಿಗಳನ್ನು ಒಳಗೊಂಡು ನಿರ್ಭಂಧಾಜ್ಞೆಯನ್ನು ಸಡಿಲಿಸಿ ಪ್ರತಿ ಬೆಳಗ್ಗೆ 7 ಗಂಟೆಯಿoದ ರಾತ್ರಿ 7 ಗಂಟೆಯವರೆಗೆ ಆದೇಶ ಹೊರಡಿಸಲಾಗಿದೆ.

ಪ್ರಸ್ತುತ ಮುಖ್ಯ ಕಾರ್ಯದರ್ಶಿ ಕರ್ನಾಟಕ ಸರಕಾರ ಇವರ ಆದೇಶದಲ್ಲಿ ಸರ್ಕಾರಿ ಇಲಾಖೆಯನ್ನು ತೆರೆದು ಎಲ್ಲಾ ಸರ್ಕಾರಿ ಇಲಾಖೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಕಛೇರಿಗೆ ಹಾಜರಾಗಿ ದೈನಂದಿನ ಕೆಲಸ ಕಾರ್ಯವನ್ನು ನಿರ್ವಹಿಸುವಂತೆ ನಿರ್ದೇಶನ ನೀಡಿರುತ್ತಾರೆ.

ಕೋವಿಡ್ 19 ಲಾಕ್‌ಡೌನ್ ಪ್ರಯುಕ್ತ ಸ್ಥಗಿತಗೊಂಡಿದ್ದ ಬಸ್ ಸಂಚಾರವನ್ನು ಪುನರಾರಂಭಿಸುವ ಬಗ್ಗೆ ಘಟಕ ವ್ಯವಸ್ಥಾಪಕರು, ಕೆಎಸ್‌ಆರ್‌ಟಿಸಿ ಉಡುಪಿ ಮತ್ತು ಮಾಲಕರು, ಭಾರತಿ ಮೋಟಾರ್ಸ್, ಉಡುಪಿ ಇವರು ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ಮಾರ್ಗಗಳಲ್ಲಿ ಬಸ್ಸು ಸಂಚಾರ ಪ್ರಾರಂಭಿಸುವ ಕುರಿತು , ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ ಇವರ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಈ ಬಗ್ಗೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳಿAದ ಕಛೇರಿಗಳಿಗೆ ಬರಲು ಬಸ್ಸಿನ ವ್ಯವಸ್ಥೆ ಮಾಡುವಂತೆ ಮನವಿಗಳು ಸ್ವೀಕೃತವಾಗಿರುತ್ತವೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ ಇವರ ಕಛೇರಿಗೆ ಸಾರ್ವಜನಿಕರಿಂದ ಮನವಿಗಳು ಬರುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಓಡಾಟ ನಡೆಸಲು ಅನುಕೂಲವಾಗುವ ಸಲುವಾಗಿ KSRTC/ಖಾಸಗಿ ಬಸ್ಸುಗಳು ಬೆಳಿಗ್ಗೆ 7 ಗಂಟೆಯಿoದ ಸಂಜೆ 7 ಗಂಟೆಯವರೆಗೆ ಸಂಚರಿಸಲು ಈ ಕಳಗೆ ತಿಳಿಸಿರುವ ಷರತ್ತುಗಳನ್ನು ವಿಧಿಸಿ KSRTC ಹಾಗೂ ಖಾಸಗಿ ಬಸ್ಸುಗಳಿಗೆ ಅನುಮತಿ ನೀಡಲಾಗಿದೆ.

ಉಡುಪಿಯಿಂದ ಕುಂದಾಪುರ 4 ಬಸ್ ಗಳು, ಹೆಬ್ರಿಗೆ 1, ಕಾರ್ಕಳಕ್ಕೆ 3, ಕಾಪು ಮಲ್ಲಾರು ಗೆ 1, ಮಣಿಪಾಲಕ್ಕೆ 2, ಬಾರ್ಕೂರು-ಸಿದ್ಧಾಪುರಕ್ಕೆ 2, ಅಲೆವೂರು ಗೆ 1, ಮಲ್ಪೆ ಗೆ 1, ಹೂಢೆ ಗೆ 1 , ಬ್ರಹ್ಮಾವರಕ್ಕೆ 2 ಬಸ್ ಹಾಗೂ ಕುಂದಾಪುರದಿAದ ಬೈಂದೂರುಗೆ 2 ಬಸ್‌ಗಳು ಸಂಚರಿಸಲು ಅನುಮತಿ ನೀಡಲಾಗಿದೆ.

ಬಸ್ ಸಂಚರಿಸಲು ಕೆಳಕಂಡ ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ:

ಘಟಕ ವ್ಯವಸ್ಥಾಪಕರು ಕೆಎಸ್‌ಆರ್‌ಟಿಸಿ ಉಡುಪಿ ಇವರು ಮನವಿಯಲ್ಲಿ ಕೋರಿರುವ ಮಾರ್ಗಗಳಲ್ಲಿ ಬಸ್ ಸಂಚರಿಸಲು ಅನುಮತಿ ನೀಡಲಾಗಿದೆ. ಖಾಸಗಿ ಬಸ್ ಮಾಲಕರು ಪರವಾನಿಗೆಯಲ್ಲಿ ನೀಡಿದ (ಎಲ್ಲಾ ಷರತ್ತುಗಳು) ಪರವಾನಿಗೆಯ ಮಾರ್ಗ ಮತ್ತ ವೇಳಾಪಟ್ಟಿಯಂತ ಸಂಚರಿಸುವುದು , ಬಸ್ಸುಗಳ ಆಸನ ಸಾಮರ್ಥ್ಯದ ಶೇಕಡಾ 50 ರಷ್ಟು ಪ್ರಯಾಣಿಕರನ್ನು ಮಾತ್ರ ಸಾಗಿಸಬಹುದು, ನಿಂತು ಪ್ರಯಾಣಿಸಲು (Standing) ಅವಕಾಶವಿಲ್ಲ. ಬೆಳಿಗ್ಗೆ 7 ಗಂಟೆಯಿAದ ಸಂಜೆ 7 ಗಂಟೆ ತನಕ ಕಾರ್ಯಾಚರಣೆ ಮಾಡಬಹುದು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ನಿಗದಿಪಡಿಸಿದ ಟಿಕೆಟ್ ದರವನ್ನು ಮಾತ್ರ ಪಡೆಯಬೇಕು, ಸಂಚರಿಸುವ ಖಾಸಗಿ ಬಸ್ಸುಗಳ ಸಂಪೂರ್ಣ ವಿವರಗಳನ್ನು ಪ್ರಾದೇಶಿಕ ಸಾರಿಗೆ ಕಛೇರಿ ಉಡುಪಿಗೆ ಒದಗಿಸಬೇಕು. ದಿನದ ಸಂಚಾರದ ಆರಂಭದ ಮೊದಲು, ಪ್ರತೀ ಟ್ರಿಪ್ ಹಾಗೂ ದಿನದ ಸಂಚಾರ ಮುಗಿದ ನಂತರ ಬಸ್ಸುಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು, ಬಸ್ಸುಗಳಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಹಾಗೂ ಸಾರ್ವಜನಿಕ ಅಂತರ ಕಾಯ್ದುಕೊಂಡು ಪ್ರಯಾಣಿಸುವಂತೆ ನೋಡಿಕೊಳ್ಳುವುದು, ಬಸ್ಸಿನ ಸಿಬ್ಬಂದಿಗಳು ಮಾಸ್ಕ್, ಗೌಸ್ ಮತ್ತು ಸ್ಯಾನಿಟೈಸರ್‌ಗಳನ್ನು ಕಡ್ಡಾಯವಾಗಿ ಬಳಸತಕ್ಕದ್ದು ,
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಮಾತ್ರ ಬಸ್ ಸಂಚರಿಸಲು ಅನುಮತಿ ನೀಡಿದ್ದು ಅಂತರ್ ಜಿಲ್ಲಾ ಬಸ್ ಸಂಚಾರವನ್ನು ನಿಷೇಧಿಸಿದೆ. ಉಡುಪಿ ಜಿಲ್ಲೆಯ ಗಡಿಗಳಲ್ಲಿ ಚೆಕ್ ಪೋಸ್ಟ್ ಅಧಿಕಾರಿಗಳ ನಿರ್ದೇಶನಗಳ ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.

Comments are closed.