ಕರಾವಳಿ

ದ.ಕ. ಜಿಲ್ಲೆಯ ಗೋಶಾಲೆಗಳಿಗೆ ಅನುದಾನ ಬಿಡುಗಡೆ

Pinterest LinkedIn Tumblr

ಮಂಗಳೂರು ಮೇ 08 : ಕೊರೋನ ಲಾಕ್‍ಡೌನ್ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕವಾಗಿ ಸಂಕಷ್ಠಕ್ಕೀಡಾಗಿರುವ ಗೋಶಾಲೆಗಳಿಗೆ ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಅನುದಾನ ಮಂಜೂರು ಮಾಡಲು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿರುತ್ತಾರೆ.

ದ.ಕ. ಜಿಲ್ಲೆಯಲ್ಲಿ ಗೋಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಿರುವ ವಿವರ ಇಂತಿವೆ:

ಶ್ರೀ ವಿಶ್ವೇಶತೀರ್ಥ ಗೋ ಸಂರಕ್ಷಣಾ ಕೇಂದ್ರ ಗೋಶಾಲೆ, ಭಾರತ ಸೇವಾಶ್ರಮ, ಕನ್ಯಾನ, ಬಂಟ್ವಾಳ ತಾ. – ರೂ. 2 ಲಕ್ಷ

ಗೋವನಿತಾಶ್ರಯ ಟ್ರಸ್ಟ್ ಗೋಶಾಲೆ, ಪಜೀರು– ರೂ. 5 ಲಕ್ಷ ,

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಕ್ಷೇತ್ರ, ಗೋಶಾಲೆ, ಕೊಕ್ಕಡ – ರೂ. 1 ಲಕ್ಷ,

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ರಿ) ಕಾಮಧೇನು ಗೋಶಾಲೆ, ಕೊಕ್ಕಡ – ರೂ. 2 ಲಕ್ಷ,

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ನಂದಿನಿ ಗೋಶಾಲೆ – ರೂ. 2 ಲಕ್ಷ,

ಗುರುದೇವ ಚಾರಿಟೆಬಲ್ ಕಮಿಟಿ ಕರೋಪಾಡಿ – ರೂ. 2 ಲಕ್ಷ,

ಶ್ರೀ ಪರಾಶಕ್ತಿ ಟ್ರಸ್ಟ್, ಶ್ರೀ ಪರಾಶಕ್ತಿ ದೇಗುಲ ಸಮುಚ್ಛಯ, ಕೋಟೆಕಾರು – ರೂ. 2 ಲಕ್ಷ,

ಸಿಯಾನ್ ಆಶ್ರಮ್, ಗಂಡಿಬಾಗಿಲು- ರೂ. 1 ಲಕ್ಷ,  ಶ್ರೀ ರಾಮ್ ಗೋಶಾಲೆ – ರೂ. 2 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಆಯ್ತುಕರ ಪ್ರಕಟಣೆ ತಿಳಿಸಿದೆ.

Comments are closed.