ಮಂಗಳೂರು:ಕೊರೋನಾ ವಿಶೇಷ ಪ್ಯಾಕೇಜ್ ಘೋಷಣೆ ಬಗ್ಗೆ ಟೀಕೆ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸಿದ ಸಿದ್ದರಾಮಯ್ಯರ ಈ ರೀತಿಯ ಟೀಕೆ ಸರಿಯಲ್ಲ. ಹೂವಿನ ಬೆಳೆಗೆ ಎಕರೆಗೆ ರೈತ ಎಷ್ಟು ಖರ್ಚು ಮಾಡುತ್ತಾನೆ ಎಂಬ ಸಾಮಾನ್ಯ ಜ್ಞಾನವೂ ಸಿದ್ದರಾಮಯ್ಯರಿಗೆ ಇಲ್ಲ. ಎಕರೆಗೆ 50 ಲಕ್ಷ ಖರ್ಚು ಮಾಡುತ್ತಾನೆ ಎಂಬ ಹೇಳಿಕೆ ಇದನ್ನು ನಿರೂಪಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ರು.
ಹೂವಿನ ಬೆಳೆಗೆ ಎಕರೆಗೆ 50 ಲಕ್ಷ ಎಲ್ಲಿ ಖರ್ಚು ಮಾಡಲಾಗುತ್ತೆ ಎಂಬ ಬಗ್ಗೆ ಸಿದ್ದರಾಮಯ್ಯ ಅಧ್ಯಯನ ಮಾಡಲಿ, ಸಿದ್ದರಾಮಯ್ಯನವರು ಯೋಚನೆ ಮಾಡಿ ಮಾತಾಡೋದು ಒಳ್ಳೆಯದು ಎಂದ್ರು.ರಾಹುಲ್ ಗಾಂಧಿ ಬಟಾಟೆಯಲ್ಲಿ ಚಿನ್ನ ತೆಗೆದ ರೀತಿಯಲ್ಲಿ, ಸಿದ್ದರಾಮಯ್ಯ ಹೂವಿನಲ್ಲಿ ಚಿನ್ನ ತೆಗೆಯಲು ಹೊರಟಿದ್ದಾರೆ, ಸಂಕಷ್ಟದ ಈ ಸಂದರ್ಭ ರಾಜಕೀಯ ಮಾಡುವ ಹೇಯ ಕೃತ್ಯ ಸಿದ್ದರಾಮಯ್ಯ ನಡೆಸಿದ್ದಾರೆ,ಕಾಂಗ್ರೆಸ್ ಕೇವಲ ರಾಜಕಾರಣಕ್ಕಾಗಿ ಈ ಕಾಲಘಟ್ಟವನ್ನು ಉಪಯೋಗಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
Comments are closed.