ಕರಾವಳಿ

‘ಲಾಕ್ ಡೌನ್’; ಮೇ 14 ರಂದು ದುಬೈಯಿಂದ ಮಂಗಳೂರಿಗೆ ಆಗಮಿಸಲಿದೆ ಮೊದಲ ವಿಮಾನ

Pinterest LinkedIn Tumblr

ದುಬೈ: ಕೊರೋನ ವೈರಸ್ ನಿಂದ ವಿದೇಶಗಳಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ವಾಪಸ್ ಕರೆತರುವ ಪ್ರಕ್ರಿಯೆಯ ಅಂಗವಾಗಿ ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೇ 14 ರಂದು ವಿಮಾನ ಆಗಮಿಸಲಿದೆ.

ಏರ್ ಇಂಡಿಯಾ ವಿಮಾನವು ಮೇ 12 ರಂದು ಮೊದಲ ಹಾರಾಟ ನಡೆಸಲಿದೆ ಎಂದು ಹೇಳಲಾಗಿತ್ತು. ಆದರೆ ಮೇ 12 ರ ಬದಲು ಮೇ 14 ರಂದು ಮೊದಲ ಹಾರಾಟ ನಡೆಸಲಿದೆ ಎಂದು ಏರ್ ಇಂಡಿಯಾ ಮೂಲ ತಿಳಿಸಿದೆ.

ಏರ್ ಇಂಡಿಯಾ ವಿಮಾನವು ಮೇ 14 ರಂದು ಸಂಜೆ 4:10 pm (UAE Time) ಹೋರಾಡಲಿದ್ದು, ಮಂಗಳೂರಿಗೆ ರಾತ್ರಿ 9:10 pm (IST) ಆಗಮಿಸಲಿದೆ ಎಂದು ಏರ್ ಇಂಡಿಯಾ ಮೂಲ ತಿಳಿಸಿದೆ.

ವಿಮಾನದಲ್ಲಿ ಗರ್ಭಿಣಿಯರು, ಮಕ್ಕಳು, ಹಿರಿಯರಿಗೆ ಮೊದಲ ಆದ್ಯತೆಯನ್ನು ನೀಡಲಾಗಿದೆ. ವಿಮಾನದಲ್ಲಿ ಆಗಮಿಸಲಿರುವ ಪ್ರಯಾಣಿಕರಲ್ಲಿ ಮಂಗಳೂರಿನವರಿಗೆ ಮಂಗಳೂರಿನಲ್ಲಿಯೇ ಕ್ವಾರಂಟೈನ್ ಮಾಡಲಾಗುವುದು. ಉಳಿದಂತೆ ಉಡುಪಿ ಜಿಲ್ಲೆಯ ಹಾಗು ಕೇರಳ ಭಾಗದ ಜನರಿಗೆ ಅವರ ಭಾಗದಲ್ಲಿಯೇ ಕ್ವಾರಂಟೈನ್ ಮಾಡಲಾಗುವುದು.

Comments are closed.