ಕರಾವಳಿ

ಬ್ರಹ್ಮಾವರ: ಲಿಪ್ಟ್ ಕೊಡೋ‌ ನೆಪದಲ್ಲಿ‌ ಮಹಿಳೆ ಅತ್ಯಾಚಾರಕ್ಕೆ ಯತ್ನಿಸಿದ ಅಪರಿಚಿತ

Pinterest LinkedIn Tumblr

ಉಡುಪಿ: ಲಾಕ್ ಡೌನ್ ಸಂದರ್ಭವನ್ನು ಇಲ್ಲೊಬ್ಬ‌ ಕಾಮುಕ ತನ್ನ ವಿಕೃತ‌ ವಾಂಛೆ ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

42 ವರ್ಷ ಪ್ರಾಯದ ಉಡುಪಿ ಆಸುಪಾಸಿನ ಮಹಿಳೆಯೊಬ್ಬರು ಬ್ರಹ್ಮಾವರದ ಖಾಸಗಿ ಅಪಾರ್ಟ್ಮೆಂಟ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು ನಿನ್ನೆ‌ಬೆಳಿಗ್ಗೆ ಕೆಲಸ ಮುಗಿಸಿ ಮನೆಗೆ ಹೋಗಲು ಹೆದ್ದಾರಿ ಬಳಿ ಒಂಟಿಯಾಗಿ ನಿಂತಿದ್ದರು. ಈ ವೇಳೆ‌ ಸುಬಗನಂತೆ ಬೈಕ್ ನಲ್ಲಿ‌ಬಂದ ವ್ಯಕ್ತಿ ಡ್ರಾಪ್ ನೀಡುವುದಾಗಿ ಹೇಳಿದ್ದ. ಬೇಡವೆಂದರೂ ಕೇಳದೇ ದುಂಬಾಲು ಬಿದ್ದು ಬೈಕ್ ಹತ್ತಿಸಿಕೊಂಡ ಆತ ಹೆದ್ದಾರಿಯಲ್ಲಿ ಸಾಗದೆ ನಿರ್ಜನ ದಾರಿಯಲ್ಲಿ ಬೈಕ್ ಓಡಿಸಿದ್ದ. ಈ ಬಗ್ಗೆ ಪ್ರಶ್ನಿಸಿದ ಮಹಿಳೆಗೆ ಹೆದ್ದಾರಿಯಲ್ಲಿ ಪೊಲೀಸರು ಇರುತ್ತಾರೆಂದು ಸಬೂಬು ಹೇಳಿದ್ದ. ಹೀಗೆ ಆ ವ್ಯಕ್ತಿ ವರ್ತನೆಯಲ್ಲಿ ಗುಮಾನಿ ಬಂದಿದ್ದು ನಿರ್ಜನ ಪ್ರದೇಶದಲ್ಲಿ‌ ನಿಲ್ಲಿಸಿದ ಆತ ಆಕೆ ಮೇಲೆ ದೌರ್ಜನ್ಯಕ್ಕೆ ಮುಂದಾಗಿದ್ದು ಮಹಿಳೆ ಕಿರುಚಾಡುತ್ತಾರೆ. ಬಳಿಕ ಮುಖ್ಯ ರಸ್ತೆಗೆ ಬಂದ ಆಕೆ ಯಾರದ್ದೋ ಉಪಕಾರ ಪಡೆದು ನಗರಕ್ಕೆ ಬಂದ ಬಳಿಕ ಸಹೋದರನ ಜೊತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತಾರೆ.

ಸಂತ್ರಸ್ತ ಮಹಿಳೆ ದೂರಿನ‌ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ‌ ಪತ್ತೆಗೆ ಬಲೆ‌ಬೀಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.