ಕರಾವಳಿ

ಮಂಗಳೂರುನಲ್ಲಿ ಕೊರೊನಾ ಸೋಂಕಿಗೆ ಮೂರನೇ ಬಲಿ : ವಿಪರ್ಯಾಸವೆಂದರೆ ಮೃತಪಟ್ಟವರೆಲ್ಲರೂ ಬಂಟ್ವಾಳ ಮೂಲದವರು..

Pinterest LinkedIn Tumblr

ಮಂಗಳೂರು / ಬಂಟ್ವಾಳ, ಎಪ್ರಿಲ್.30: ದ.ಕ.ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೂರನೇ ಬಲಿಯಾಗಿದೆ. (ಕೊರೋನ‌) ಸೋಂಕು ದೃಢಪಟ್ಟು ಮಂಗಳೂರು ವೆನ್ಲಾಕ್ ನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತಾಲೂಕಿನ ಬಂಟ್ವಾಳ ಪೇಟೆಯ ಮತ್ತೋರ್ವ 67 ವರ್ಷ ಪ್ರಾಯದ ಮಹಿಳೆ ಇಂದು ಮೃತಪಟ್ಟಿದ್ದಾರೆ.

ಬಂಟ್ವಾಳ ಕಸಬಾ ಮೂಲದ ಮಹಿಳೆ ಮೃತಪಟ್ಟವರು. ಕಳೆದ ಕೆಲವು ದಿನಗಳಿಂದ ಈ ಮಹಿಳೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೆ, ನಿನ್ನೆಯಿಂದ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ವೆಂಟಿಲೇಟರ್ ಅಳವಡಿಸಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾದ ಅವರು ಮೃತಪಟ್ಟಿದ್ದಾರೆ ಎಂದು ದ.ಕ. ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ.

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಈ ಮಹಿಳೆಯನ್ನು ಎಪ್ರಿಲ್ 18ರಂದು ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್ – 19 ಪರೀಕ್ಷೆಗೆ ಕಳುಹಿಸಿದ್ದ ಇವರ ಗಂಟಲ ದ್ರವ ಮಾದರಿಯ ವರದಿಯಲ್ಲಿ ಪಾಸಿಟಿವ್ ಬಂದಿತ್ತು.

ಆಸ್ಪತ್ರೆಗೆ ದಾಖಲಿಸಿದ್ದ ಬಳಿಕ ಆರೋಗ್ಯದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಇವರಿಗೆ ತುರ್ತು ನಿಗಾ ಘಟಕದಲ್ಲಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರದಂದು ಮೃತಪಟ್ಟಿದ್ದಾರೆ.

ಇವರು ಎಪ್ರಿಲ್ 19 ಮತ್ತು 23ರಂದು ಮೃತರಾದ ಬಂಟ್ವಾಳ ಪೇಟೆಯ ಒಂದೇ ಮನೆಯ ಇಬ್ಬರು ಮಹಿಳೆಯರ ನೆರೆಮನೆಯವರಾಗಿದ್ದಾರೆ.

ವಿಪರ್ಯಾಸವೆಂದರೆ ಮೃತಪಟ್ಟವರೆಲ್ಲರೂ ಬಂಟ್ವಾಳ ಮೂಲದವರು.

ವಿಪರ್ಯಾಸವೆಂದರೆ ಮೃತಪಟ್ಟವರೆಲ್ಲರೂ ಬಂಟ್ವಾಳ ಮೂಲದವರಾಗಿದ್ದಾರೆ. ಇಲ್ಲಿಯ ತನಕ ದ.ಕ. ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರು ಬಂಟ್ವಾಳ ಪೇಟೆಯವರೇ ಆಗಿದ್ದಾರೆ. ಈ ಪೈಕಿ ಒಂದೇ ಮನೆಯ ಅತ್ತೆ ಸೊಸೆ ಈಗಾಗಲೇ ಮೃತಪಟ್ಟಿದ್ದು, ಇದೀಗ ನೆರೆ ಮನೆಯ ಮಹಿಳೆ ಮೃತಪಡುವ ಮೂಲಕ ಬಂಟ್ವಾಳ ಪೇಟೆ ಜನರಲ್ಲಿ ಆತಂಕ ಉಂಟಾಗಿದೆ.

ಈಗಾಗಲೇ ಬಂಟ್ವಾಳ ಕಸಬ ನಿವಾಸಿಗಳು ಒಂದೇ ಮನೆಯ ಇಬ್ಬರು ಮಹಿಳೆಯರು ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಅವರ ನೆರೆ ಮನೆಯ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ತಾಯಿ ಮಗಳಲ್ಲಿ ಸೋಂಕು ಪತ್ತೆಯಾಗಿ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಲು ತಾಯಿಯಲ್ಲಿ ಸೋಂಕು ದೃಢಪಟ್ಟರೆ ಬಳಿಕ ಮಗಳಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ಮಹಿಳೆ 67 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇನ್ನು ಮಗಳಿಗೆ ಚಿಕಿತ್ಸೆ ಮುಂದುವರೆಸಲಾಗಿದೆ.

ಮುಖ್ಯಂಶಗಳು :

ದ.ಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮೂರನೇ ಬಲಿ

ಬಂಟ್ವಾಳದ ಕೊರೋನಾ ಪೀಡಿತ ವೃದ್ದೆ ಚಿಕಿತ್ಸೆ ಫಲಿಸದೇ ಸಾವು

ಮಂಗಳೂರಿನ ವೆನ್ ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಸಾವು

ಬಂಟ್ವಾಳ ಕಸಬಾದ 67 ವರ್ಷದ P-409 ವೃದ್ದೆಗೆ ಕೊರೋನಾಗೆ ಬಲಿ

ಎ.21ರಂದು ಕೊರೋನಾ ಸೋಂಕು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ವೃದ್ದೆ

ಎ.19ರಂದು ಸಾವನ್ನಪ್ಪಿದ್ದ ಬಂಟ್ವಾಳದ ಮಹಿಳೆಯಿಂದ ಹರಡಿದ್ದ ಸೋಂಕು

ಎ.19ರಂದು ಮೃತಪಟ್ಟಿದ್ದ ಬಂಟ್ವಾಳ ಕಸಬಾದ ಮಹಿಳೆಯ ನೆರೆಮನೆ ನಿವಾಸಿಯಾಗಿದ್ದ ವೃದ್ಧೆ

ಬಂಟ್ವಾಳ ಕಸಬಾ ಗ್ರಾಮದಲ್ಲೇ ಮೂರು ಬಲಿ ಪಡೆದ ಮಾರಕ ಕೊರೋನಾ

ಎ.19ರಂದು ಬಂಟ್ವಾಳ ಕಸಬಾದ ಮಹಿಳೆ,ಎ.23 ರಂದು ಮಹಿಳೆಯ ಅತ್ತೆ ಮತ್ತು ಇಂದು ನೆರೆಮನೆಯ ವೃದ್ಧೆ ಬಲಿ

Comments are closed.