ಕರಾವಳಿ

ಲಾಕ್ ಡೌನ್ ನಡುವೆಯೇ ಕಾರಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ: ಕೋಟ ಪೊಲೀಸರಿಂದ ಇಬ್ಬರ ಬಂಧನ

Pinterest LinkedIn Tumblr

ಉಡುಪಿ: ಲಾಕ್ ಡೌನ್ ಆದೇಶ ಉಲ್ಲಂಘಿಸಿ ಕಾರಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಕೋಟ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಮದ್ಯ ಹಾಗೂ ಕೃತ್ಯಕ್ಕೆ ಬಳಿಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಉಡುಪಿ ಕೋಟ ಸಮೀಪದ ವಡ್ಡರ್ಸೆ ನಿವಾಸಿ ದರ್ಶನ್ ನಾಯ್ಕ (34) ಹಾಗೂ ಕುಂದಾಪುರ ತ್ರಾಸಿ ಹೊಸ್ಪೇಟೆ ನಿವಾಸಿ ಪ್ರಸ್ತೀಕ್ (28) ಎಂದು ಗುರುತಿಸಲಾಗಿದೆ.

ಕೋವಿಡ್-19 (ಕೊರೊನಾ ವೈರಾಣು ಖಾಯಿಲೆ-2019) ಖಾಯಿಲೆಯು ವ್ಯಾಪಕವಾಗಿ ಹರಡದಂತೆ ರಾಜ್ಯ ಸರ್ಕಾರವು ಲಾಕ್ಡೌನ್ ಆದೇಶ ಹೊರಡಿಸಿದ್ದು, ಏಪ್ರಿಲ್ 29ರಂದು ಕೋಟ ಪೊಲೀಸ್ ಠಾಣೆ ಪಿಎಸ್ಐ ನಿತ್ಯಾನಂದ ಗೌಡ ಅವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಬ್ರಹ್ಮಾವರ ತಾಲೂಕು ವಡ್ಡರ್ಸೆ ಗ್ರಾಮದ ಜಿ.ಪಿ. ಬಸ್ ನಿಲ್ದಾಣದ ಹತ್ತಿರ ಕಾರ್ ನಂಬ್ರ KA-18-P-5233 ನೇದರಲ್ಲಿ ಇಬ್ಬರು ಆರೋಪಿಗಳು ಮದ್ಯದ ಟೆಟ್ರಾ ಪ್ಯಾಕ್ಗಳನ್ನು ಕೋವಿಡ್-19 ವೈರಾಣು ಪ್ರಯುಕ್ತ ರಾಜ್ಯಾದ್ಯಂತ ಮದ್ಯ ನಿಷೇದ ಇರುವ ಸಮಯ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಮತ್ತು ಕಾರಿನಲ್ಲಿದ್ದ ಬೆಂಗಳೂರು ಮಾಲ್ಟ್ ವಿಸ್ಕಿ 90 ಎಮ್.ಎಲ್ ಎಂದು ಬರೆದಿರುವ 25 ಟೆಟ್ರಾ ಪ್ಯಾಕ್ ಒಟ್ಟು ಪ್ರಮಾಣ. 2.250 ಮೌಲ್ಯ 625/- ರೂಪಾಯಿಗಳನ್ನು ಮತ್ತು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ-1 ಮತ್ತು ಮದ್ಯ ಮಾರಾಟಕ್ಕೆ ಬಳಸಿದ 4,00,000/- ರೂಪಾಯಿ ಮೌಲ್ಯದ ಕಾರ್ ಸ್ವಾಧೀನ ಪಡಿಸಿಕೊಂಡಿದ್ದಾರೆ.

ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.