ಮಂಗಳೂರು: ಕೊರೋನಾ ಪ್ರಕರಣಗಳಿಗೆ ಸಂಬಂಧಿಸಿ ಮಂಗಳೂರು ನಗರದ ಜನತೆಗೆ ಕೊಂಚ ರಿಲೀಫ್ ಸಿಕ್ಕಿದೆ.
ನಗರದಲ್ಲಿ ಸೋಮವಾರ ಒಂದೇ ದಿನ ಎರಡು ಪಾಸಿಟಿವ್ ಪ್ರಕರಣಗಳು ಕಂಡು ಬಂದ ಪರಿಣಾಮ ಜನತೆ ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದರು. ಆದರೆ ಮಂಗಳವಾರ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ. ಬಂದ 101 ವರದಿಗಳು ಕೂಡ ನೆಗೆಟಿವ್ ಆಗಿರುವುದು ಜನತೆಯಲ್ಲಿ ಸಮಾಧಾನ ತಂದಿದೆ.
ಜ್ವರ, ನೆಗಡಿ ಸೇರಿದಂತೆ ಕೊರೋನಾ ಲಕ್ಷಣ ಕಂಡುಬಂದ ಒಟ್ಟ್ತು 297 ಮಂದಿಯ ಸ್ಯಾಂಪಲ್‌ಗಳನ್ನು ಮಂಗಳವಾರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೊಳಗೊಂಡಂತೆ ಒಟು 536 ಸ್ಯಾಂಪಲ್‌ಗಳ ವರದಿಗಳು ಇನ್ನಷ್ಟೇ ಬರಬೇಕಿದೆ.
ಜಿಲ್ಲೆಯಲ್ಲಿ ಇದುವರೆಗೆ 39,592 ಮಂದಿಯ ಸ್ಕ್ರೀನಿಂಗ್ ನಡೆದಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
Comments are closed.