ಕರಾವಳಿ

ಗೇರು ಬೀಜ ಮಾರಾಟಕ್ಕೆ ನಿರ್ಬಂಧವಿಲ್ಲ : ಸಚಿವ ಕೋಟ ಸ್ಪಷ್ಟನೆ

Pinterest LinkedIn Tumblr

 

ಮಂಗಳೂರು : ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವ್ಯಾಪ್ತಿಯಲ್ಲಿ ಬರುವ ಗೇರು ಕೃಷಿಕರು, ತಮ್ಮ ಗೇರು ಬೆಳೆಯನ್ನು ಕಟಾವು ಮಾಡುವುದೂ ಸೇರಿದಂತೆ, ಸಾಗಾಟ ಮತ್ತು ಮಾರಟ ಮಾಡಲು ಯಾವುದೇ ನಿರ್ಬಂಧವಿರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ಮಧ್ಯವರ್ತಿಗಳು ತಮ್ಮ ಗೇರು ಬೀಜವನ್ನು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ ಎಂಬ ಗೇರು ಕೃಷಿಕರ ದೂರಿನ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ ಎಂದು ಕೋಟ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.