ಕರಾವಳಿ

ಸುಡು ಬಿಸಿಲಿನಲ್ಲಿ ರ್ತವ್ಯದಲ್ಲಿರುವ ಪೋಲಿಸರಿಗೆ ಪಟ್ಲ ಸತೀಶ್ ಶೆಟ್ಟಿಯವರಿಂದ ಎಳನೀರು ವಿತರಣೆ : ವ್ಯಾಪಕ ಶ್ಲಾಘನೆ

Pinterest LinkedIn Tumblr

ಮಂಗಳೂರು : ಕರಾವಳಿಯ ಸುಡು ಬಿಸಿಲಿನಲ್ಲಿಯೂ ಹಗಲಿರುಳು ಕರ್ತವ್ಯದಲ್ಲಿರುವ ಪೋಲಿಸರಿಗೆ ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರು ಎಳನೀರು, ಬಿಸ್ಕಟ್ ಪ್ಯಾಕೆಟ್ ಮತ್ತು ನೀರಿನ ಬಾಟಲ್ ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದರು.

ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದಾಗಿನಿಂದ ತುರ್ತು ಹಾಗೂ ಅಗತ್ಯ ಸೇವೆಗಳಲ್ಲಿ ಪೋಲೀಸರ ಸೇವೆಯೂ ಬಹಳ ಮುಖ್ಯ. ಕರಾವಳಿಯ ಸುಡು ಬಿಸಿಲಿನಲ್ಲಿಯೂ ಹಗಲಿರುಳು ಕರ್ತವ್ಯದಲ್ಲಿರುವ ಪೋಲಿಸರನ್ನು, ತನ್ನ ಫೌಂಡೇಶನ್ ಮೂಲಕ ಯಕ್ಷಗಾನ ಕಲಾವಿದರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವ ಸಂದರ್ಭದಲ್ಲಿ ಗಮನಿಸಿದ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರು ಪಡುಬಿದ್ರೆಯಿಂದ ಮುಲ್ಕಿ, ಕಿನ್ನಿಗೋಳಿ, ಕಟೀಲು, ಬಜಪೆ, ಕಾವೂರು, ಮಂಗಳೂರು, ಬಂಟ್ವಾಳ,ಕಲ್ಲಡ್ಕ, ವಿಟ್ಲ ,ಕೇರಳ ಗಡಿ ಯವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರಿ ಬಿಸಿಲಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ಪೋಲೀಸ್ ಸಿಬ್ಬಂದಿಯವರಿಗೆ ವೈಯುಕ್ತಿಕ ನೆಲೆಯಲ್ಲಿ ಸ್ವತ: ಪಟ್ಲರೇ ಬಂದು ಎಳನೀರು, ಬಿಸ್ಕಟ್ ಪ್ಯಾಕೆಟ್ ಮತ್ತು ನೀರಿನ ಬಾಟಲ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಹಾಪ್ ಕಾಮ್ಸ್ ನ ರವಿ ಶೆಟ್ಟಿ ಅಶೋಕನಗರ ಇವರು ಜತೆಗಿದ್ದು ಸಹಕರಿಸಿದರು. ಸತೀಶ್ ಶೆಟ್ಟಿಯವರ ಸೇವಾಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ದ.ಕ ಪೋಲಿಸ್ ಇಲಾಖೆಯ ಪೊಲೀಸ್ ಸಿಬ್ಬಂದಿ ವರ್ಗ ಸತೀಶ್ ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸಿದರು.

Comments are closed.