ಕರಾವಳಿ

ಕೊರೊನಾ ಹಾವಳಿ : ಸಮುದಾಯದವರ ರಕ್ಷಣೆಗೆ ಮುಂಬಯಿ ಕುಲಾಲ್ ಸಂಘದಿಂದ ಕುಲಾಲ್ ಹೆಲ್ಪ್ ಲೈನ್

Pinterest LinkedIn Tumblr

ಮುಂಬಯಿ : ಮುಂಬಯಿ ಹಾಗೂ ಉಪನಗರದಲ್ಲಿರುವ ಸಂಕಷ್ಟದಲ್ಲಿರುವ ಕುಲಾಲ ಸಮಾಜ ಭಾಂಧವರ ಯೋಗಕ್ಷೇಮ ವಿಚಾರಿಸಲು ಮುಂದಾಗಿದೆ ಮುಂಬಯಿಯ ಕುಲಾಲ್ ಸಂಘ. ಜಗತ್ತಿನಲ್ಲಿ ಕೊರೊನಾ ಹಾವಳಿ ಮಿತಿಮೀರಿದ್ದು, ಕಷ್ಟದಲ್ಲಿರುವವ ಕುಲಾಲ ಸಮುದಾಯದವರ ರಕ್ಷಣೆಗೆ ಕುಲಾಲ ಸಂಘ ಹೆಲ್ಫ್ ಲೈನ್ ಮೂಲಕ ಸಹಾಯ ಮಾಡಲು ಮುಂದಾಗಿದೆ.

ಮುಂಬಯಿ ಹಾಗೂ ಉಪನಗರದಲ್ಲಿ ಇರುವ ಸಮಸ್ತ ಕುಲಾಲ ಸಮಾಜ ಬಾಂಧವರನ್ನು ಸಂಪರ್ಕಿಸಿ ನಿಮ್ಮ ಕಷ್ಟ ದುಃಖಗಳನ್ನು ವಿಚಾರಿಸಲು ಅನಾನುಕೂಲವಾಗುತ್ತಿದೆ. ಆದರೂ ನಿಮ್ಮೆಲ್ಲರ ಯೋಗಕ್ಷೇಮ ಮುಂಬಯಿ ಕುಲಾಲ ಸಂಘದ ಮಹತ್ವದ ಜವಾಬ್ದಾರಿಯಾಗಿದೆ .

ಜಗತ್ತಿನಲ್ಲೇ ಹರಡಿರುವ ಮಹಾಮಾರಿ ಕೊರೋನಾ ರೋಗದಿಂದ ಪಾರಾಗಲು ನಮ್ಮವರ ರಕ್ಷಣೆಯನ್ನು ಮಾಡುವುದರೊಂದಿಗೆ ದೇಶದ ರಕ್ಷಣೆಗಾಗಿ ಮುಂಬಯಿ ಮಹಾನಗರ ಹಾಗೂ ಉಪನಗರಗಳಲ್ಲಿನ ಸಮಾಜ ಬಾಂಧವರ ಸೇವೆಗಾಗಿ ಕುಲಾಲ್ ಹೆಲ್ಪ್ ಲೈನ್ ನ್ನು ಪ್ರಾರಂಭಿಸಿದ್ದೇವೆ.

ಈ ಅವಧಿಯಲ್ಲಿ ನಮ್ಮ ಸಮಾಜ ಬಾಂಧವರು ಸಂಧಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾದಲ್ಲಿ ಯಾವುದೇ ಸಹಕಾರದ ಅಗತ್ಯವಿದ್ದಲ್ಲಿ ನಿಮ್ಮ ಸೇವೆಗಾಗಿ ಕುಲಾಲ ಹೆಲ್ಪ್ ಲೈನ್ ನ್ನು ಸಂಪರ್ಕಿಸಬಹುದು. ನೀವು ನಿಮ್ಮ ಅಸಹಾಯಕತೆಯನ್ನು ನಮಗೆ ತಿಳಿಸಿದಲ್ಲಿ ಸ್ಥಳೀಯ ಪೊಲೀಸ್ ರ ಸಹಕಾರದೊಂದಿಗೆ ಕುಲಾಲ ಹೆಲ್ಪ್ ಲೈನ್ ನಿಮಗೆ ಸಹಕರಿಸುವುದು.

ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಸೇವೆಗಾಗಿ ನಾವು ಸದಾ ಸಿದ್ದರಿದ್ದೇವೆ. ಏಪ್ರಿಲ್ 14ರವರೆಗೆ ನಿಮ್ಮ ಸೇವಾಕಾರ್ಯಗಳಿಗೆ ಹೆಲ್ಪ್ಲೈನ್ ಕಾರ್ಯನಿರ್ವಹಿಸಲಿದೆ. ದೈನಂದಿನ ಬದುಕು ನಿರ್ವಹಿಸಲು ಕಷ್ಟವಾದಾಗ ಅಥವಾ ವೈದ್ಯಕೀಯ ಸಮಸ್ಯೆ ಆದಾಗ ನಿಮ್ಮ ಸೇವೆಗೆ ಸ್ಥಳೀಯ ಪೊಲೀಸ್ ಸೇವಾಕೇಂದ್ರದ ಸಹಾಯದೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತೇವೆ.

ಮುಂಬೈ ಕುಲಾಲ ಸಂಘದ ಅಧ್ಯಕ್ಷರಾದ ದೇವದಾಸ್ ಕುಲಾಲ್ ಉಪಾಧ್ಯಕ್ಷರು ರಘು ಮೂಲ್ಯ ಕಾರ್ಯದರ್ಶಿ ಕರುಣಾಕರ್ ಸಾಲ್ಯಾನ್ ಕೋಶಧಿಕಾರಿ ಜಯ ಅಂಚನ್ ಮಹಿಳಾ ವಿಭಾಗದ ಕಾರ್ಯಧ್ಯಕ್ಷ ಮಮತಾ ಗುಜರಾತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಎಚ್ಚರವಾಗಿರಿ – ಜಾಗೃತರಾಗಿರಿ:

ಮಾಯಾನಗರಿಯಲ್ಲಿ ಹೆಚ್ಚು ಹೆಚ್ಚು ಪಸರಿಸಿ ಕೊಳ್ಳುತ್ತಿರುವ ಕೋರೋನಾ ರೋಗ ಯಾವುದೇ ಸಂದರ್ಭದಲ್ಲಿ ನಮ್ಮನ್ನು ಅಪ್ಪಿ ಕೊಳ್ಳಬಹುದು ಆದ್ದರಿಂದ ತಾವೆಲ್ಲರೂ ಮನೆಯಿಂದ ಹೊರಬಾರದಂತೆ ಎಚ್ಚರವಾಗಿರಿ, ಜಾಗೃತರಾಗಿರಿ.

ಅಗತ್ಯ ವಸ್ತುಗಳಿಗೆ ಮಾತ್ರ ಮನೆಯಿಂದ ಹೊರಗೆ ಬನ್ನಿ ನಮ್ಮ ಸಮಾಜ ಬಾಂಧವರ ನೋವುಗಳು ಮತ್ತು ಅವರ ಸಮಸ್ಯೆಗಳು ನಮಗೆ ಅರ್ಥವಾಗುತ್ತದೆ ಆದರೆ ಯಾವುದೇ ರೀತಿಯಲ್ಲಿ ತಮಗೆ ಸಂಪರ್ಕಿಸುವುದಕ್ಕೆ ಕಷ್ಟವಾಗುತ್ತಿದೆ ಆದರೆ ನಿಮಗೆ ಸಹಾಯ ಹಸ್ತ ಮಾಡುವುದಕ್ಕಾಗಿ *ಕುಲಾಲ ಸಂಘ ಮುಂಬಯಿ* *ಕುಲಾಲ ಹೆಲ್ಪ್ ಲೈನ್* ಪ್ರಾರಂಭಿಸಿ ಕೊಂಡಿದ್ದೇವೆ.

ಪ್ರತಿ ಉಪನಗರಗಳಲ್ಲಿ ಸ್ವಯಂ ಸೇವಕರ ಸಮಾಜಬಾಂಧವರು ಸೇವೆ ಮಾಡುವುದಕ್ಕಾಗಿ ಜಾಗೃತರಾಗಿದ್ದಾರೆ ತಿಳಿಸಲು ಸಂತೋಷವಾಗುತ್ತಿದೆ. ನಿಮ್ಮೆಲ್ಲರ ಸುರಕ್ಷಿತ. ಆರೋಗ್ಯ ಕಾಪಾಡಿಕೊಳ್ಳಿ ಯಾವುದೇ ಸಂದರ್ಭದಲ್ಲಿ ಸಂಘದ ಸೇವಾ ಕಾರ್ಯದ ಅಗತ್ಯವಿದ್ದಾಗ ಕುಲಾಲ ಹೆಲ್ಪ್ ಲೈನ್ ಗೆ ಸಂಪರ್ಕಿಸಿ,
ದೇವದಾಸ್ ಕುಲಾಲ್ ಅಧ್ಯಕ್ಷರು ಕುಲಾಲ ಸಂಘ ಮುಂಬಯಿ

ಆಸಕ್ತರು ಮಾತ್ರ ಸಂಪರ್ಕಿಸಿ: ಅತ್ಯಂತ ಅಗತ್ಯವಿರುವ ದೈನಂದಿನ ಖರ್ಚು ಹೊಂದಿಸಲು ಆಸಕ್ತರಾಗಿರುವ ಕುಲಾಲ ಬಾಂಧವರಿಗೆ ಮಾತ್ರ ಈ ಸೇವೆ.

Comments are closed.