ಕರಾವಳಿ

ಜಿಲ್ಲೆಯ ಪ್ರಸಿದ್ಧ ಶನಿ ಕ್ಷೇತ್ರವಾದ ಬಜ್ಪೆ ಶನೈಶ್ಚರ ದೇವಳದಲ್ಲಿ ಸೇವೆ ಸ್ಥಗಿತ

Pinterest LinkedIn Tumblr

ಮಂಗಳೂರು ; ಜಿಲ್ಲೆಯ ಪ್ರಸಿದ್ಧ ಶನಿ ಕ್ಷೇತ್ರವಾದ ಬಜ್ಪೆ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನ ಹಾಗೂ ಸೇವೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ದೇವಳದ ಧರ್ಮದರ್ಶಿ ಆನಂದ ಪೂಜಾರಿ ತಿಳಿಸಿದ್ದಾರೆ.

ದೇಶಾದ್ಯಂತ ಮಹಾಮಾರಿ ಕೋರೋನಾ ತಡೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 24 ರಂದು ನೀಡಿದ ಕರೆಯಂತೆ 21 ದಿನಗಳ ಬಂದ್ ಇರುವುದರಿಂದ ಈ ತಿಂಗಳ 25 ರಿಂದ ಎಪ್ರಿಲ್ 14 ರ ವರೆಗೆ ದೇವಸ್ಥಾನಕ್ಕೆ ಭಕ್ತಾದಿಗಳ ಪ್ರವೇಶ ಇರುವುದಿಲ್ಲ. ಈ ಅವಧಿಯಲ್ಲಿ ಧರ್ಮದರ್ಶಿಗಳ ಉಪಸ್ಥಿತಿಯಲ್ಲಿ ನಡೆಯುವ ದೈನಂದಿನ ಪೂಜೆಯ ಹೊರತಾಗಿ ಸಾರ್ವಜನಿಕರಿಗೆ ದೇವರ ದರ್ಶನ, ವಿವಿಧ ಸೇವೆ ಹಾಗೂ ಎಣ್ಣೆ ಸಮರ್ಪಣೆಗಳಿಗೆ ಅವಕಾಶವಿರುವುದಿಲ್ಲ.

ದೇವಸ್ಥಾನದಲ್ಲಿ ಈಗಾಗಲೇ ಚಂಡಿಕಾ ಯಾಗ ನಡೆಸಿ ಲೋಕ ಕ್ಷೇಮಕ್ಕಾಗಿ ಪ್ರಾರ್ಥಿಸಲಾಗಿದ್ದು ಲಾಕ್ ಡೌನ್ ಮುಗಿದ ಬಳಿಕ 2020 ಎಪ್ರಿಲ್ 15 ರಿಂದ ಎಂದಿನಂತೆ ಸಾರ್ವಜನಿಕರಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು. ಅಲ್ಲಿಯ ವರೆಗೆ ಕ್ಷೇತ್ರದ ಭಕ್ತಾದಿಗಳು ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ದೇಶನದಂತೆ ಮನೆಯಲ್ಲೇ ಉಳಿದು ನಿತ್ಯಾನುಷ್ಠಾನಗಳಿಂದಿದ್ದು ಸಹಕಾರ ನೀಡಬೇಕೆಂದು ಬಜ್ಪೆ ಶ್ರೀ ಶನೈಶ್ಚರ ದೇವಾಲಯದ ಧರ್ಮದರ್ಶಿ ಆನಂದ ಪೂಜಾರಿ ಮತ್ತು ಶ್ರೀ ಶನೈಶ್ಚರ ಪೂಜಾ ಸೇವಾ ಸಮಿತಿ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.